ಸುಷ್ಮಾ ಸ್ವರಾಜ್ (67).. ರಾಷ್ಟ್ರ ರಾಜಕಾರಣ ಕಂಡ ಮಾತೃ ಹೃದಯದ ಚತುರ ನಾಯಕಿ. ಇನ್ನು ಅವರು ಬರೀ ನೆನಪು ಮಾತ್ರ…ನಿನ್ನೆ ರಾತ್ರಿ (ಮಂಗಳವಾರ) ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಸುಪ್ರೀಂಕೋರ್ಟ್ನ ವಕೀಲೆಯಾಗಿ ಸೇವೆ ಸಲ್ಲಿಸಿದ್ದರು. ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟು ಅಲ್ಲೂ ಬಹು ದೊಡ್ಡ ಯಶಸ್ಸನ್ನು ಕಂಡವರು. ಇಡೀ ರಾಷ್ಟ್ರವೇ ಮೆಚ್ಚುವ ನಾಯಕಿಯಾಗಿ ಬೆಳೆದವರು. ಒಟ್ಟು 7 ಬಾರಿ ಸಂಸದೆಯಾಗಿ, ಮೂರು ಬಾರಿ ಶಾಸಕಿಯಾಗಿದ್ದರು. ಕೇಂದ್ರ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವೆಯಾಗಿ, ಆರೋಗ್ಯ ಸಚಿವೆಯಾಗಿ, ವಿದೇಶಾಂಗ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. ದೆಹಲಿಯ 5ನೇ ಮುಖ್ಯಮಂತ್ರಿಯಾಗಿ ಕೂಡ ( 12 ಅಕ್ಟೋಬರ್ 1998 – 3 ಡಿಸೆಂಬರ್ 1998) ಜವಾಬ್ದಾರಿ ನಿರ್ವಹಿಸಿದ್ದರು.
ಸುಷ್ಮಾ ಸ್ವರಾಜ್
ಜನನ : 14 ಫೆಬ್ರವರಿ 1959, ಹರಿಯಾಣದ ಅಂಬಾಲಾ ಕಂಟ್
ತಂದೆ : ಹರದೇವ್ ಶರ್ಮಾ
ತಾಯಿ : ಲಕ್ಷ್ಮೀ ದೇವಿ
ಶಿಕ್ಷಣ, ವೃತ್ತಿ : ಅಂಬಾಲಾ ಕಂಟೋನ್ಮೆಂಟ್ನ ಸನಾತನ ಧರ್ಮ ಕಾಲೇಜಿನಲ್ಲಿ ಸಂಸ್ಕೃತ ಮತ್ತು ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿಯನ್ನು ಪಡೆದರು. ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಭ್ಯಾಸ ಮಾಡಿದರು. 1973ರಲ್ಲಿ ಭಾರತದ ಸುಪ್ರೀಂಕೋರ್ಟ್ನಲ್ಲಿ ವಕೀಲರಾಗಿ ಅಭ್ಯಾಸ ಆರಂಭಿಸಿದರು.
ರಾಜಕೀಯ ಜೀವನ :
1970ರಲ್ಲಿ ಎಬಿವಿಪಿಯೊಂದಿಗೆ ರಾಜಕೀಯ ಪ್ರವೇಶಿಸಿದರು. ಅವರ ಪತಿ ಸ್ವರಾಜ್ ಕೌಶಲ್ ಅವರು ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಅವರಿಂದ ಸುಷ್ಮಾ ಅವರು ಜಾರ್ಜ್ ಫರ್ನಾಂಡಿಸ್ ಅವರಿಗೆ ಆಪ್ತರಾದರು. 1975ರಲ್ಲಿ ಫರ್ನಾಂಡಿಸ್ ಅವರ ಕಾನೂನು ರಕ್ಷಣಾ ತಂಡದ ಭಾಗವಾಗಿದ್ದರು. ಜಯಪ್ರಕಾಶ್ ನಾರಾಯಣ್ ಅವರೊಡನೆ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ತುರ್ತು ಪರಿಸ್ಥಿತಿ ಬಳಿಕ ಬಿಜೆಪಿ ಸೇರಿದರು. ಬಳಿಕ ‘ಕಮಲ’ ಪಡೆದ ಬಹು ದೊಡ್ಡ ನಾಯಕಿಯಾಗಿ ಬೆಳೆದಿದ್ದು ಈಗ ಇತಿಹಾಸ.
25ನೇ ವಯಸ್ಸಿನಲ್ಲಿ ಅಂಬಾಲಾ ಕಂಟ್ನಿಂದ ಶಾಸನ ಸಭೆಗೆ ಆಯ್ಕೆಯಾದ ಅವರು ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ. 1977 ರಿಂದ 1982ರವರೆಗೆ ಹರಿಯಾಣ ವಿಧಾನಸಭೆಯ ಸದಸ್ಯರಾಗಿದ್ದರು.
* 1977ರ ಜುಲೈನಲ್ಲಿ ಆಗಿನ ಮುಖ್ಯಮಂತ್ರಿ ದೇವಿ ಲಾಲ್ ಅವರ ನೇತೃತ್ವದಲ್ಲಿ ಜನತಾ ಪಕ್ಷದ ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇವೆ
* 1976 -ಜನತಾ ಪಕ್ಷದ ಹರಿಯಾಣ ರಾಜ್ಯಾಧ್ಯಕ್ಷೆಯಾಗಿ ಸೇವೆ.
ರಾಜಕಾರಣದ ಪ್ರಮುಖ ಹೆಜ್ಜೆಗಳು, ನಿಭಾಯಿಸಿದ ಹುದ್ದೆಗಳು
1977-82ರಲ್ಲಿ ಹರಿಯಾಣ ವಿಧಾನಸಭೆಯ ಸದಸ್ಯರಾಗಿ ಚುನಾಯಿತರಾದರು
19977-79 ಕ್ಯಾಬಿನೆಟ್ ಮಂತ್ರಿ, ಕಾರ್ಮಿಕ ಮತ್ತು ಉದ್ಯೋಗ, ಹರಿಯಾಣ ಸರ್ಕಾರ
1982-90 ಹರಿಯಾಣ ವಿಧಾನಸಭೆಯ ಸದಸ್ಯರಾಗಿ ಚುನಾಯಿತರಾದರು
1982-90 ಕ್ಯಾಬಿನೆಟ್ ಮಂತ್ರಿ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ಹರಿಯಾಣ ಸರ್ಕಾರ
1990-96 ರಲ್ಲಿ ರಾಜ್ಯಸಭೆಗೆ ಆಯ್ಕೆ (1ನೇ ಅವಧಿ)
1996-97 ಹನ್ನೊಂದನೇ ಲೋಕಸಭೆ ಸದಸ್ಯೆ(ಎರಡನೆಯ ಅವಧಿ)
1996(16 ಮೇ-1.ಜೂನ್)- ಯೂನಿಯನ್ ಕ್ಯಾಬಿನೆಟ್ ಮಂತ್ರಿ, ಮಾಹಿತಿ ಮತ್ತು ಪ್ರಸಾರ
1998-99( 10 ಮಾರ್ಚ್ 1998- 26 ಏಪ್ರಿಲ್ 1999) ಹನ್ನೆರಡನೆಯ ಲೋಕಸಭೆ ಸದಸ್ಯೆ(3ನೇ ಅವಧಿ)
1999( 19 ಮಾರ್ಚ್- 12 ಅಕ್ಟೋಬರ್] ಯೂನಿಯನ್ ಕ್ಯಾಬಿನೆಟ್ ಮಂತ್ರಿ, ಮಾಹಿತಿ ಮತ್ತು ಪ್ರಸಾರ ಮತ್ತು ದೂರಸಂಪರ್ಕ
1999( 13 ಅಕ್ಟೋಬರ್ – 3 ಡಿಸೆಂಬರ್] ದೆಹಲಿಯ ಮುಖ್ಯಮಂತ್ರಿ
1998(ನವೆಂಬರ್) ದೆಹಲಿ ಅಸೆಂಬ್ಲಿಯ ಹಾಝ್ ಖಾಸ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು
2000-06 ರಾಜ್ಯಸಭೆ ಸದಸ್ಯೆ (4ನೇ ಅವಧಿ)
2003-04( 26 ಜನವರಿ – 22 ಮೇ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮತ್ತು ಸಂಸದೀಯ ವ್ಯವಹಾರಗಳ ಸಚಿವೆ
2006-09 ರಾಜ್ಯಸಭೆ ಸದಸ್ಯೆ (5ನೇ ಅವಧಿ)
2009-14( 16 ಮೇ 2009- 18 ಮೇ 2014) 15ನೇ ಲೋಕಸಭೆ ಸದಸ್ಯೆ ( 6ನೇ ಅವಧಿ)
2009( 3 ಜೂನ್ 2006- 21 ಡಿಸೆಂಬರ್ 2009] ಲೋಕಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕಿ
2009-14( 21 ಡಿಸೆಂಬರ್ 2009- 18 ಮೇ 2014) ಲಾಲ್ ಕೃಷ್ಣ ಆಡ್ವಾಣಿ ಬದಲಿಗೆ ಪ್ರತಿಪಕ್ಷ ನಾಯಕಿ
2014( 26 ಮೇ) 16ನೇ ಲೋಕಸಭೆ ಸದಸ್ಯೆ (7ನೇ ಅವಧಿ)
26- ಮೇ 2014 -30 ಮೇ 2019 ಭಾರತದ ಒಕ್ಕೂಟದ ವಿದೇಶಾಂಗ ಸಚಿವೆ
‘ನಾನು ಜೀವನವಿಡಿ ಈ ದಿನಕ್ಕೆ ಕಾಯ್ತಿದ್ದೆ’ : ಸುಷ್ಮಾ ಸ್ವರಾಜ್ ಕೊನೆಯ ಟ್ವೀಟ್..!