Tuesday, November 5, 2024

ಸೆಡ್ಡು ಹೊಡೆದು ತಯಾರಾಗುತ್ತಿದೆ ಸಿದ್ದರಾಮೋತ್ಸವದ ಸಿದ್ದತೆ

ಬೆಂಗಳೂರು : ಡಿಕೆಶಿ ಬಣದ ವಿರೋಧದ ನಡುವೆಯೂ ಸೆಡ್ಡು ಹೊಡೆದು ತಯಾರಾಗುತ್ತಿದೆ ಸಿದ್ದರಾಮೋತ್ಸವದ ಸಿದ್ದತೆ.

ನಗರದಲ್ಲಿ, 50 ಎಕರೆ ಜಾಗದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದ್ದು, 25 ಎಕರೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ನಡೆಯಲಿದೆ. ಕಾರ್ಯಕ್ರಮಕ್ಕೆ ಬರುವವರಿಗೆ 5000 ಕ್ಕು ಹೆಚ್ಚು ಬಸ್ ವ್ಯವಸ್ಥೆ, 1000 ಟಿಟಿ, ಟ್ರೈನ್ ವ್ಯವಸ್ಥೆ ಇರಲಿದ್ದು, ಒಟ್ಟು 750 ಊಟದ ಕೌಂಟರ್, 250 , 250, 250 ವಿಭಾಗಿಸಿ ಮೂರು ಕೌಂಟರ್ ಮಾಡಲಾಗುತ್ತದೆ.

ಇನ್ನು, ಅಡಿಗೆ ತಯಾರಿ ಜುಲೈ 27 ರಿಂದಲೇ ಪ್ರಾರಂಭಗೊಂಡಿದ್ದು, ಆಗಸ್ಟ್ 3 ಕ್ಕೆ ಬೆಳಗ್ಗೆಯಿಂದ ರಾತ್ರಿಯವರೆಗೂ ನಿರಂತರ ಊಟದ ವ್ಯವಸ್ಥೆ ಇರಲಿದೆ. ಮೈಸೂರು ಪಾಕ್ ಸ್ಪೆಷಲ್ ಸ್ವೀಟ್, ನಾಲ್ಕು ರೀತಿಯ ಬಾತ್, ಎರಡು ರೀತಿಯ ಪಾಲವ್, ಅನ್ನ ಸಾಂಬರ್, ಜೋಳದ ರೊಟ್ಟಿ ಎಣ್ಗಾಯ್, 200 ಜನ ಗಣ್ಯರಿಗೆ ವೇದಿಕೆಯಲ್ಲಿ ಕೂರಲು ಆಸನ ವ್ಯವಸ್ಥೆ, ಒಂದು ಎಕರೆ ಪೂರ್ತಿ ಜರ್ಮನ್ ಟೆಕ್ನಾಲಜಿ ಶಾಮಿಯಾನ, ಅಭಿಮಾನಿಗಳು, ಕಾರ್ಯಕರ್ತರಿಗೆ ಐದು ಲಕ್ಷಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ. ಹಂಸಲೇಖ ಅವರಿಂದ ಸಿದ್ರಾಮೋತ್ಸವ ಬಗ್ಗೆ ವಿಶೇಷ ಹಾಡು ಕಂಪೋಸಿಂಗ್ ಆಗಸ್ಟ್ 3 ಕ್ಕೆ ಹಂಸಲೇಖ ತಂಡದಿಂದ ಬೆಳಗ್ಗೆಯಿಂದ ಸಂಜೆಯ ವರೆಗೂ ಕಾರ್ಯಕ್ರಮಗಳ ಮಧ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

RELATED ARTICLES

Related Articles

TRENDING ARTICLES