ಬೆಂಗಳೂರು: ಮನರಂಜನೆ ಜೊತೆಗೆ ಮೆಸೇಜ್ ಕೂಡ ಕೊಟ್ರೆ ಜನ ಅದನ್ನ ಅಷ್ಟೇ ಪ್ರೀತಿಯಿಂದ ಸ್ವೀಕರಿಸ್ತಾರೆ ಅನ್ನೋದಕ್ಕೆ ಗುರುಶಿಷ್ಯರು ಬೆಸ್ಟ್ ಎಕ್ಸಾಂಪಲ್ ಆಗಿದೆ. ಶುಕ್ರವಾರ ತೆರೆಕಂಡ ಶರಣ್- ತರುಣ್ ಜುಗಲ್ಬಂದಿ, ಬೆಳ್ಳಿತೆರೆ ಮೇಲೆ ಬೊಂಬಾಟ್ ಆಗಿ ವರ್ಕೌಟ್ ಆಗಿದೆ. ಬಾಕ್ಸ್ ಆಫೀಸ್ನಲ್ಲಿ ವಿಜಲ್ ಹೊಡಿತಿರೋ ಶರಣ್ ಮಾಸ್ಟರ್ಗೆ ಕರುನಾಡು ಶರಣು ಎಂದಿದೆ.
ಶರಣ್ ಸಿನಿಮಾಗಳಿಗೆ ಹೀರೋ ಶರಣ್ ಅವ್ರೇ ಆದ್ರೂ ಸಹ, ಅಸಲಿ ಹೀರೋ ಬೇರೇನೇ ಇದ್ದಾರೆ. ಅದು ಬೇರಾರೂ ಅಲ್ಲ ನಟ, ನಿರ್ದೇಶಕ, ಬರಹಗಾರ, ಕ್ರಿಯೇಟಿವ್ ಹೆಡ್ ತರುಣ್ ಸುಧೀರ್. ಹೌದು.. ತರುಣ್ ಸೋಲೋ ಹೀರೋ ಆದ ಬಳಿಕ ಅವ್ರ ಅಸಲಿ ಶಕ್ತಿಯೇ ಈ ತರುಣ್ ಸುಧೀರ್. ಇವರಿಬ್ಬರೂ ಒಂದಾದ್ರೆ ಅಲ್ಲಿ ಮ್ಯಾಜಿಕ್ ಕಟ್ಟಿಟ್ಟ ಬುತ್ತಿ.
ವಿಕ್ಟರಿ, ರ‍್ಯಾಂಬೊ, ಅಧ್ಯಕ್ಷ ಸಿನಿಮಾಗಳಿಂದ ಇಲ್ಲಿಯವರೆಗಿನ ಶರಣ್ ಏಳು ಬೀಳುಗಳಲ್ಲಿ ತರುಣ್ ಪಾತ್ರ ಮಹತ್ವದ್ದು. ಅವರ ಜೊತೆಗಿದ್ರೆ ಶರಣ್ಗೆ ಪ್ರಪಂಚವೇ ಗೆದ್ದ ಖುಷಿ. ಸದ್ಯ ಗುರುಶಿಷ್ಯರು ಗೆದ್ದಿದ್ದಾರೆ ಈ ಕುಚಿಕುಗಳು. ಜಡೇಶ್ ಕೆ ಹಂಪಿ ನಿರ್ದೇಶನದ ಗುರುಶಿಷ್ಯರು ಚಿತ್ರಕ್ಕೆ ನಟ ಶರಣ್ ಹಾಗೂ ನಿರ್ದೇಶಕ ತರುಣ್ ಇಬ್ಬರೂ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.
ಶುಕ್ರವಾರ ತೆರೆಕಂಡ ಈ ಚಿತ್ರ ರಾಜ್ಯದ ಮೂಲೆ ಮೂಲೆಯಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಹೌಸ್ಫುಲ್ ಪ್ರದರ್ಶನ ಕಾಣ್ತಿರೋ ಗುರುಶಿಷ್ಯರು, ಎಂಟರ್ಟೈನ್ಮೆಂಟ್ ಜೊತೆ ಕ್ರೀಡಾಸಕ್ತಿಯನ್ನ ಹೆಚ್ಚಿಸೋ ಕಾರ್ಯ ಮಾಡ್ತಿದೆ. ಅದ್ರಲ್ಲೂ ನಶಿಸಿ ಹೋಗ್ತಿರೋ ದೇಸಿ ಕ್ರೀಡೆ ಖೋ ಖೋನ ಉತ್ತೇಜಿಸೋ ಈ ಸಿನಿಮಾ ನೋಡುಗರಿಗೆ ಮಸ್ತ್ ಥ್ರಿಲ್ ಕೊಡ್ತಿದೆ.
ದೈಹಿಕ ಶಿಕ್ಷಕರಾಗಿ ಶರಣ್ ಕಮಾಲ್ ಮಾಡಿದ್ರೆ, ಹಳ್ಳಿ ಮೇಷ್ಟ್ರ ಅಭಿಮಾನಿಯಾಗಿ ನಿಶ್ವಿಕಾ ನಾಯ್ಡು ಮಿಂಚು ಹರಿಸಿದ್ದಾರೆ. ಇನ್ನು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಪುತ್ರ ಅಪೂರ್ವ ಕಾಸರವಳ್ಳಿ ಇದೇ ಮೊದಲ ಬಾರಿ ಖಡಕ್ ಖಳನಾಯಕನಾಗಿ ಅಬ್ಬರಿಸಿದ್ದಾರೆ. 90ರ ದಶಕದ ಬ್ಯಾಕ್ಡ್ರಾಪ್ನಲ್ಲಿ ನಡೆಯೋ ಈ ಸಿನಿಮಾ ರೆಟ್ರೋ ಜಾನರ್ ಜೊತೆ ರೆಟ್ರೋ ಕ್ರೀಡೆಯನ್ನ ಮೆಟ್ರೋ ಮಂದಿಗೆ ಹೊತ್ತು ಬಂದಿದೆ.
ಇನ್ನು ಶರಣ್ ಹಾಗೂ ತರುಣ್ ಜೋಡಿ ಈ ಸಿನಿಮಾ ಮೂಲಕ ಮುಂದಿನ ಪೀಳಿಗೆಯ ಹೊಸ ಕಲಾವಿದರನ್ನ ಇಂಟ್ರಡ್ಯೂಸ್ ಮಾಡಿದೆ. ಶರಣ್ ಪುತ್ರ ಹೃದಯ್, ಲವ್ಲಿಸ್ಟಾರ್ ಪ್ರೇಮ್ ತನಯ ಏಕಾಂತ್, ನವೀನ್ ಕೃಷ್ಣ ಪುತ್ರ, ರಾಜು ಗೌಡ ಮಗ ಹೀಗೆ ಸಾಕಷ್ಟು ಮಂದಿ ಚಿಗುರು ಮೀಸೆ ಯುವಕರನ್ನ ಬೆಳಕಿಗೆ ತರಲಾಗಿದೆ. ವಿಶೇಷ ಅಂದ್ರೆ ಕಡ್ಡಿಪುಡಿ, ಟಗರು, ಸಲಗದಂತಹ ಹಿಟ್ ಚಿತ್ರಗಳ ಬರಹಗಾರ ಮಾಸ್ತಿ, ಎ ಸರ್ಟಿಫೈಡ್ ಸಿನಿಮಾಗಳಿಂದ ಯುಎ ಸರ್ಟಿಫೈಡ್ ಚಿತ್ರಕ್ಕೆ ಬಂದಿದ್ದಾರೆ. ಯೆಸ್.. ಮಾಸ್ತಿ ಸಂಭಾಷಣೆಯಲ್ಲಿ ಗುರುಶಿಷ್ಯರು ಚಿತ್ರ ಮತ್ತಷ್ಟು ಸ್ಟ್ರಾಂಗ್ ಅನಿಸಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ