ಮಿಜೋರಾಂ : ವಿಧಾನಸಭಾ ಚುನಾವಣೆಯಲ್ಲಿ ಎಮ್ಎನ್ಎಫ್ (ಮಿಜೋ ನ್ಯಾಷನಲ್ ಫ್ರಂಟ್) ಭರ್ಜರಿ ಜಯ ದಾಖಲಿಸಿದೆ. ಹಾಲಿ ಮುಖ್ಯಮಂತ್ರಿ, ಕಾಂಗ್ರೆಸ್ ಕ್ಯಾಂಡಿಡೇಟ್ ಲಾಲ್ ಥನ್ ಹವ್ಲಾ ಸೋಲನುಭವಿಸಿದ್ದಾರೆ. ತಮ್ಮ ಖಾಯಂ ಕ್ಷೇತ್ರವಾದ ದಕ್ಷಿಣ ಚಾಂಪೈ ಕ್ಷೇತ್ರದಿಂದ ಮತ್ತು ಸೇರ್ಫಿಪ್ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. ದಕ್ಷಿಣ ಚಾಂಪೈ ಕ್ಷೇತ್ರದಲ್ಲಿ ಎಂಎನ್ಎಫ್ ಕ್ಯಾಂಡಿಡೇಟ್ ಟಿ.ಜೆ ಲಾಲ್ನಂಟ್ಲುಂಗಾ ವಿರುದ್ಧ ಲಾಲ್ ಥನ್ ಹವ್ಲಾ1,049 ಮತಗಳ ಅಂತರದ ಸೋಲುಂಡಿದ್ದಾರೆ. ಸೇರ್ಫಿಪ್ ನಲ್ಲೂ ಪರಾಭವಗೊಂಡಿದ್ದಾರೆ. ಲಾಲ್ ಥನ್ ಹವ್ಲಾ 5 ಬಾರಿ ಸಿಎಂ ಆಗಿದ್ದರು.
ಒಟ್ಟು 40 ವಿಧಾನಸಭಾ ಕ್ಷೇತ್ರಗಳಲ್ಲಿ 26 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರೋ ಎಮ್ಎನ್ಎಫ್ ಆಡಳಿತದ ಚುಕ್ಕಾಣಿ ಹಿಡಿಯಲಿದೆ. ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಹಾಗೂ ಇತರೆ 9 ಕ್ಷೇತ್ರಗಳಲ್ಲಿ ಮಾತ್ರ ಗೆಲವು ಕಂಡಿವೆ. ಮ್ಯಾಜಿಜ್ ನಂಬರ್ 21 ಇದ್ದು, ಎಮ್ಎನ್ಎಫ್ 26 ಕ್ಷೇತ್ರಗಳ ಗೆಲುವಿನೊಂದಿಗೆ ಸ್ಪಷ್ಟ ಮೆಜಾರಿಟಿ ಪಡೆದಿದ್ದು, ಜನಾದೇಶದಿಂದ ಸರ್ಕಾರ ರಚಿಸಲಿದೆ.
ಮಿಜೋರಾಂ ಎಮ್ಎನ್ಎಫ್ ತೆಕ್ಕೆಗೆ; ಮುಖ್ಯಮಂತ್ರಿಗೇ ಸೋಲು..!
TRENDING ARTICLES