ನವದೆಹಲಿ : ಲೋಕಸಭಾ ಚುನಾವಣೆಗೆ ಡೇಟ್ ಫಿಕ್ಸ್ ಆಗಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರ ಅವರು ಚುನಾವಣಾ ದಿನಾಂಕವನ್ನು ಘೋಷಿಸಿದ್ದಾರೆ. ದೇಶದಲ್ಲಿ 7 ಹಂತಗಳಲ್ಲಿ, ರಾಜ್ಯದಲ್ಲಿ 7 ಹಂತಗಳಲ್ಲಿ ಎಲೆಕ್ಷನ್ ನಡೆಯಲಿದೆ. ಏಪ್ರಿಲ್ 11ರಂದು ಮೊದಲ ಹಂತ, ಏಪ್ರಿಲ್ 18ಕ್ಕೆ ಎರಡನೇ, ಏಪ್ರಿಲ್ 23ಕ್ಕೆ 3ನೇ, ಏಪ್ರಿಲ್ 29ಕ್ಕೆ 4ನೇ, ಮೇ 6ಕ್ಕೆ 5ನೇ. ಮೇ 12ಕ್ಕೆ 6ನೇ, ಮೇ ಮೇ 19ಕ್ಕೆ 7ನೇ ಹಂತದ ಚುನಾವಣೆ ನಡೆಯಲಿದೆ. ಮೇ 23ಕ್ಕೆ ಚುನಾವಣಾ ಫಲಿತಾಂಶ ಹೊರ ಬೀಳಲಿದೆ.
ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ 14 ಕ್ಷೇತ್ರಗಳಿಗೆ ಏಪ್ರಿಲ್ 18ರಂದು ಹಾಗೂ ಇನ್ನುಳಿದ 14 ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದೆ.
ದೇಶಾದ್ಯಂತ 7 ಹಂತಗಳಲ್ಲಿ ಲೋಕಸಭಾ ಚುನಾವಣೆಯ ಕಂಪ್ಲೀಟ್ ಡಿಟೇಲ್ಸ್
ದೇಶದ 543 ಲೋಕಸಭಾ ಸ್ಥಾನಗಳಿಗೆ 7 ಹಂತಗಳಲ್ಲಿ ಮತದಾನ
1ನೇ ಹಂತ – ಏಪ್ರಿಲ್ 11 – 20 ರಾಜ್ಯಗಳ 91 ಕ್ಷೇತ್ರಗಳಲ್ಲಿ ಮತದಾನ
2ನೇ ಹಂತ – ಏಪ್ರಿಲ್ 18 – 13 ರಾಜ್ಯಗಳ 97 ಕ್ಷೇತ್ರಗಳಲ್ಲಿ ಮತದಾನ
3ನೇ ಹಂತ – ಏಪ್ರಿಲ್ 23 – 14 ರಾಜ್ಯಗಳ 115 ಕ್ಷೇತ್ರಗಳಲ್ಲಿ ಮತದಾನ
4ನೇ ಹಂತ – ಏಪ್ರಿಲ್ 29 – 9 ರಾಜ್ಯಗಳ 71 ಕ್ಷೇತ್ರಗಳಲ್ಲಿ ಮತದಾನ
5ನೇ ಹಂತ – ಮೇ 6 – 7 ರಾಜ್ಯಗಳ 51 ಕ್ಷೇತ್ರಗಳಲ್ಲಿ ಮತದಾನ
6ನೇ ಹಂತ – ಮೇ 12 – 7 ರಾಜ್ಯಗಳ 59 ಕ್ಷೇತ್ರಗಳಲ್ಲಿ ಮತದಾನ
7ನೇ ಹಂತ – ಮೇ 19 – 8 ರಾಜ್ಯಗಳ 59 ಕ್ಷೇತ್ರಗಳಲ್ಲಿ ಮತದಾನ
ಲೋಕಸಭೆಯ ಚುನಾವಣೆ ಫಲಿತಾಂಶ ಮೇ 23 ರಂದು ಪ್ರಕಟ
ಕರ್ನಾಟಕದಲ್ಲಿ 2 ಹಂತಗಳಲ್ಲಿ ಎಲೆಕ್ಷನ್ – ಇಲ್ಲಿದೆ ಪಕ್ರಿಯೆಯ ಕಂಪ್ಲೀಟ್ ಡಿಟೇಲ್ಸ್..!