Friday, December 27, 2024

ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದು, ಮುಂದೇನು?

ನವದೆಹಲಿ : ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ಮತ್ತು 35 (ಎ)ಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಜಮ್ಮು-ಕಾಶ್ಮೀರಕ್ಕೆ ಸಿಕ್ಕಿದ್ದ ವಿಶೇಷ ಸ್ಥಾನಮಾನ ರದ್ದಾಗಿರುವುದರಿಂದ ಮುಂದೇನು ಎನ್ನುವ ಪ್ರಶ್ನೆ ಸಹಜ.

ವಿಶೇಷ ಸ್ಥಾನಮಾನ ರದ್ದು- ಮುಂದೇನು?
* ಸಂವಿಧಾನದ ಪ್ರಕಾರ ಕಾಶ್ಮೀರದ ಮೂಲ ನಿವಾಸಿಗಳ ಹೊರತಾಗಿ ಬೇರೆ ಯಾರೂ ಈ ಕಣಿವೆ ರಾಜ್ಯದಲ್ಲಿ ಸ್ಥಿರಾಸ್ತಿ ಹೊಂದುವ ಹಕ್ಕಿರಲಿಲ್ಲ. ಅಷ್ಟೇ ಅಲ್ಲದೆ ಹೊರ ರಾಜ್ಯದವರು ಕಾಶ್ಮೀರದಲ್ಲಿ ಶಾಶ್ವತವಾಗಿ ನೆಲೆಸುವಂತಿರಲಿಲ್ಲ. ಈಗ ವಿಧಿ ರದ್ದಾಗಿರುವುದರಿಂದ ಭಾರತದ ಇತರೆ ರಾಜ್ಯದ ಜನರು ಅಲ್ಲಿ ಆಸ್ತಿ ಪಡೆಯಬಹುದು.
* ಕಾಶ್ಮೀರ ಮಹಿಳೆಯರನ್ನ ಮದುವೆಯಾದ್ರೂ ಭೂಮಿ ಹಕ್ಕು ಸಿಗುತ್ತೆ. ಅವರ ಮಕ್ಕಳಿಗೂ ಆಸ್ತಿಯನ್ನ ಹೊಂದುವ ಹಕ್ಕು ಸಿಗುತ್ತೆ. ಜಮ್ಮು ಕಾಶ್ಮೀರದಲ್ಲಿ ಬೇರೆಯವರು ಸರ್ಕಾರಿ ಉದ್ಯೋಗಕ್ಕೆ ಸೇರಬಹುದು.
* ಭಾರತ ಸರ್ಕಾರದ ಕಾಯ್ದೆಗಳು ಜಮ್ಮುಕಾಶ್ಮೀರಕ್ಕೂ ಅನ್ವಯಿಸುತ್ತೆ. ಜಮ್ಮುಕಾಶ್ಮೀರ ಇನ್ಮುಂದೆ ರಾಜ್ಯವಲ್ಲ, ಕೇಂದ್ರಾಡಳಿ ಪ್ರದೇಶ. ಜಮ್ಮುಕಾಶ್ಮೀರ, ಲಡಾಕ್‌ ಇನ್ಮುಂದೆ ಕೇಂದ್ರದ ಅಧೀನದಲ್ಲಿ ಕಾರ್ಯ ನಿರ್ವಹಣೆ ಮಾಡಲಿದೆ. ಲೆಪ್ಟಿನೆಂಟ್ ಗವರ್ನರ್ ನೇಮಕವಾಗಲಿದೆ.
* ಜಮ್ಮುಕಾಶ್ಮೀರದಲ್ಲಿ ಇನ್ಮುಂದೆ ರಾಜ್ಯಪಾಲರದ್ದೇ ಆಡಳಿತ
*ನಾಳೆ, ರಾಜ್ಯಸಭೆ ಮತ್ತು ಲೋಕಸಭೆ ಕಲಾಪ ಅಂತ್ಯ
* ಮಸೂದೆ ಅಂಗೀಕಾರವಾಗದಿದ್ದರೂ ಸುಗ್ರೀವಾಜ್ಞೆ ಜಾರಿಯಲ್ಲಿ ಇರುತ್ತೆ

RELATED ARTICLES

Related Articles

TRENDING ARTICLES