Thursday, December 26, 2024

ಮೊದಲ ಚುನಾವಣೆಯಲ್ಲೇ ನ್ಯಾಮಗೌಡಗೆ ಭರ್ಜರಿ ಗೆಲುವು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ದೋಸ್ತಿ ಸರ್ಕಾರದ ಕ್ಯಾಂಡಿಡೇಟ್ ಆಗಿ ಆನಂದ್ ನ್ಯಾಮಗೌಡ 39,480 ಮತಗಳ ಅಂತರದ ಗೆಲುವು ಪಡೆದಿದ್ದಾರೆ. ಬಿಜೆಪಿ ಕ್ಯಾಂಡಿಡೇಟ್ ಶ್ರೀಕಾಂತ್ ಕುಲಕರ್ಣಿ ವಿರುದ್ಧ ಆನಂದ್ ನ್ಯಾಮಗೌಡ ಗೆದ್ದಿದ್ದಾರೆ.
ದಿ.ಸಿದ್ದುನ್ಯಾಮಗೌಡ ಅವರ ಪುತ್ರರಾಗಿರುವ ಆನಂದ ನ್ಯಾಮಗೌಡ ಅವರಿಗೆ ಇದು ಮೊದಲ ಎಲೆಕ್ಷನ್. ಮೊದಲ ಚುನಾವಣೆಯಲ್ಲೇ ಗೆಲುವಿನ ನಗೆಬೀರಿ ವಿಧಾನಸಭೆಗೆ ಎಂಟ್ರಿಕೊಟ್ಟಿದ್ದಾರೆ. ತಂದೆ ನಿಧನದಿಂದ ತೆರವಾದ ಸ್ಥಾನಕ್ಕೆ ಇವರು ಜನಾದೇಶ ಪಡೆದಿದ್ದಾರೆ.
ಒಟ್ಟು 1,57,089 ಮತಗಳಲ್ಲಿ ಕಾಂಗ್ರೆಸ್ ನ ಆನಂದ ನ್ಯಾಮಗೌಡ ಅವರು 97,017 ಮತಗಳನ್ನು, ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ 57,537 ಗಳನ್ನು ಪಡೆದಿದ್ದಾರೆ.
ಪರಶುರಾಮ ಮಹಾರಾಜನವರ (ಪ್ರಜಾಪರಿವರ್ತನ ಪಾರ್ಟಿ) 731 ಮತ, ಯಮನಪ್ಪ ಗುಣದಾಳ (ರಿಪಬ್ಲಿಕ್ ಆಫ್ ಇಂಡಿಯಾ.ಕರ್ನಾಟಕ) 178 ಮತಗಳನ್ನು, ಆಂಬ್ರೋಸ್ ಡಿ ಮೆಲ್ಗೊ (ಪಕ್ಷೇತರ) 237 ಮತಗಳನ್ನು, ರವಿ ಪಡಸಲಗಿ-(ಪಕ್ಷೇತರ) 219 ಮತಗಳನ್ನು, ಸಂಗಮೇಶ ಚಿಕ್ಕನರಗುಂದ (ಪಕ್ಷೇತರ) 373 ಮತಗಳನ್ನು ಪಡೆದಿದ್ದಾರೆ.

RELATED ARTICLES

Related Articles

TRENDING ARTICLES