Thursday, January 16, 2025

ಹಿಟ್​ಮ್ಯಾನ್ ರೋಹಿತ್ ಮತ್ತೊಂದು ಡಬಲ್ ಸೆಂಚುರಿ!

ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅದ್ಭುತ ಫಾರ್ಮಲ್ಲಿದ್ದಾರೆ. ಒಡಿಐ, ಟಿ20 ಫಾರ್ಮೆಟ್​ನಲ್ಲಿ ಖಾಯಂ ಸ್ಥಾನಗಿಟ್ಟಿಸಿಕೊಂಡಿರುವ, ಅಷ್ಟೇ ಅಲ್ಲದೆ ಉಪ ನಾಯಕರಾಗಿರುವ ರೋಹಿತ್ ಶರ್ಮಾ ಟೆಸ್ಟ್​ ಕ್ರಿಕೆಟಿನಲ್ಲೂ ಆರಂಭಿಕರಾಗಿ ತಮ್ಮ ಸ್ಥಾನ ಗಟ್ಟಿಪಡಿಸಿಕೊಂಡಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್​ನಲ್ಲಿ ರೋಹಿತ್ ಡಬಲ್ ಸೆಂಚುರಿ ಸಿಡಿಸಿದ್ದಾರೆ.
ರಾಂಚಿಯಲ್ಲಿ ನಡೆಯುತ್ತಿರುವ ಟೆಸ್ಟಿನಲ್ಲಿ ಅಬ್ಬರಿಸುತ್ತಿರುವ ರೋಹಿತ್ ಶರ್ಮಾ ದ್ವಿಶತಕ ಮಾಡಿದ್ದಾರೆ. ಇದು ಟೆಸ್ಟ್ ಕ್ರಿಕೆಟಿನಲ್ಲಿ ರೋಹಿತ್​ ಮೊದಲ ಡಬಲ್ ಸೆಂಚುರಿ. ಒಡಿಐನಲ್ಲಿ ಒಂದಲ್ಲ ಎರಡಲ್ಲ ಮೂರು ದ್ವಿಶತಕ ಸಿಡಿಸಿದ್ದಾರೆ. ಇನ್ನು ಸೌತ್ ಆಫ್ರಿಕಾ ವಿರುದ್ಧದ ಪ್ರಸಕ್ತ ಸರಣಿಯಲ್ಲಿ ಮೊದಲ ಮ್ಯಾಚಿನಲ್ಲಿ ಎರಡೂ ಇನ್ನಿಂಗ್ಸ್​ನಲ್ಲೂ ಶರ್ಮಾ ಶತಕ ಬಾರಿಸಿದ್ದರು (176, 127).

RELATED ARTICLES

Related Articles

TRENDING ARTICLES