ಬಾಗಲಕೋಟೆ : ೨೦೨೪ ರ ಚುನಾವಣೆ ನಂತರ ದೇಶದಲ್ಲಿ ಕಾಂಗ್ರೆಸ್ ದೀಪಕ್ಕೆ ದಿಕ್ಕಿಲ್ಲದ ಮನೆಯಾಗುತ್ತೆ ಎಂದು ಬಾಗಲಕೋಟೆಯಲ್ಲಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಳುಗುವ ಹಡಗು,ಅಲ್ಲಿ ಏನು ಆಗಲ್ಲ. ಕಾಂಗ್ರೆಸ್ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಇನ್ನು, ಕಾಂಗ್ರೆಸ್ ಜೊಡೋ ಯಾತ್ರೆ ಸಮಯದಲ್ಲಿ ಕಾಂಗ್ರೆಸ್ ತ್ವರೆಯುವ ಕೈ ನಾಯಕರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೇರಳದಲ್ಲಿ ಅಷ್ಟೇ ಅಲ್ಲ ಇಡೀ ದೇಶದ ೩೦ ರಾಜ್ಯಗಳಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಿದ್ದಾರೆ. ಗುಲಾಬ್ ನಭೀ ಆಜಾದ್ ಅವರಂತ ಹಿರಿಯ ಕಾಂಗ್ರೆಸ್ ಗರು ಮನನೊಂದು ಪಕ್ಷ ತ್ವರೆದಿದ್ದಾರೆ. ಸಿಎಂ ಗೆಹ್ಲೊಟ್ ಅವರು ಪಕ್ಷ ತ್ವರೆಯುವ ಹಾದಿಯಲ್ಲಿಯೇ ಇದ್ದಾರೆ. ಕಾಂಗ್ರೆಸ್ ನ ಕೆಲವರು ಜೈಲಿಗೆ ಹೋಗಿ ಬೇಲ್ ಮೇಲೆ ಓಡಾಡ್ತಿದ್ದಾರೆ. ಕಾಂಗ್ರೆಸ್ ಪಕ್ಷ ದುರಾಡಳಿತದಿಂದ ಸರ್ವನಾಶವಾಗ್ತಿದೆ ಎಂದು ಹೇಳಿದರು.
ಅದಲ್ಲದೇ, ಮುಂದಿನ ಚುನಾವಣೆಯಲ್ಲಿ ಉಳಿದ ಒಂದೆರಡು ರಾಜ್ಯಗಳಲ್ಲೂ ನಿರ್ಣಾಮ ಆಗ್ತದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನೇಮಕ ಆಗದ ಪರಿಸ್ಥಿತಿ ಪಕ್ಷಕ್ಕೆ ಬಂದೊದಗಿದೆ. ಕಾಂಗ್ರೆಸ್ ನ ಅಧಿನಾಯಕಿ ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಬೇಲ್ ಮೇಲಿದ್ದಾರೆ. ಕಾಂಗ್ರೆಸ್ಸಿಗರಿಗೆ ಬಿಜೆಪಿ ಮೇಲೆ ಆರೋಪ ಮಾಡುವ ನೈತಿಕ ಹಕ್ಕಿಲ್ಲ ಎಂದರು.