Friday, January 3, 2025

ಮಂಡ್ಯದಲ್ಲಿ ಪ್ರಚಾರಕ್ಕೆ ಹಣದ ಬೇಡಿಕೆ ಇಟ್ರಾ ಹಿರಿಯ ನಾಯಕ..?

ಮಂಡ್ಯ : ಇಡೀ ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ ಸ್ವಾಮಿ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿರೋದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್. ನಿಖಿಲ್ -ಸುಮಲತಾ ಸ್ಪರ್ಧೆಯಿಂದ ಸ್ಟಾರ್​ವಾರ್​ಗೆ ಸಾಕ್ಷಿಯಾಗಿರುವ ಮಂಡ್ಯದಲ್ಲಿ ಕಾಂಗ್ರೆಸ್​​​ನ ಹಿರಿಯ ನಾಯಕರೊಬ್ಬರ ಮೇಲೆ ಪ್ರಚಾರಕ್ಕೆ ಹಣದ ಬೇಡಿಕೆ ಇಟ್ಟ ಆರೋಪ ಕೇಳಿಬಂದಿದೆ.
ಹೌದು, ಜೆಡಿಎಸ್​ ಅಭ್ಯರ್ಥಿ ಪರ ಪ್ರಚಾರಕ್ಕೆ ಬರಲು ಕಾಂಗ್ರೆಸ್ ಹಿರಿಯ ನಾಯಕ ಜಿ.ಮಾದೇಗೌಡ್ರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಅನ್ನೋ ಮಾತು ಕೇಳಿಬಂದಿದೆ. ಕಾವೇರಿ ಹೋರಾಟಗಾರ ಜಿ. ಮಾದೇಗೌಡ ಅವರದ್ದಿ ಎನ್ನಲಾದ ಸಂಭಾಷಣೆಯೊಂದು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮಾದೇಗೌಡ್ರು ಸಚಿವ ಸಿ.ಎಸ್​ ಪುಟ್ಟರಾಜು ಅವರ ಜೊತೆ ನಡೆಸಿದ್ದಾರೆ ಎನ್ನಲಾಗಿರೋ ಸಂಭಾಷಣೆಯದು.
ಮಾದೇಗೌಡ್ರು ಪುಟ್ಟರಾಜು ಅವರ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಅದಕ್ಕೆ ಪುಟ್ಟರಾಜು ಅವರು ನಾನೆಲ್ಲಾ ಅರೆಂಜ್​ ಮಾಡ್ತೀನಿ ಎಂದಿದ್ದಾರೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಜಿ. ಮಾದೇಗೌಡ ಮನೆಗೆ ಹೆಚ್​.ಡಿ ಕುಮಾರಸ್ವಾಮಿ ಹೋಗಿದ್ದನ್ನು ಈ ವೇಳೆ ಸ್ಮರಿಸಬಹುದು.

RELATED ARTICLES

Related Articles

TRENDING ARTICLES