Monday, January 20, 2025

‘ಕುಮಾರಣ್ಣನಿಂದ ಇಡೀ ಕರ್ನಾಟಕ ‘ಡಿ’ ಬಾಸ್ ಅಂತಿದೆ’..!

ಮಂಡ್ಯ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ..! ನನ್ನನ್ನು 10 ಜನ ಮಾತ್ರ ಡಿ.ಬಾಸ್ ಅಂತಿದ್ರು. ಆದ್ರೆ, ಇವತ್ತು ಕುಮಾರಣ್ಣನಿಂದ ಇಡೀ ಕರ್ನಾಟಕ ‘ಡಿ’ಬಾಸ್​ ಅಂತಿದೆ ಅಂತ ಹೇಳಿದ್ರು.
ಸುಮಲತಾ ಅವರ ಸ್ವಾಭಿಮಾನಿ ಸಮ್ಮಿಲನ ಸಮಾವೇಶದಲ್ಲಿ ಮಾತನಾಡಿದ ಅವರು, ”ನಾವೇನು ಕಳ್ಳತನ, ರೇಪ್, ಕೊಲೆ ಮಾಡಿದ್ದೀವೇನಣ್ಣಾ?ಅಮ್ಮ ಎಲೆಕ್ಷನ್​ಗೆ ನಿಂತಿದ್ದಾರೆ ನಾವು ಸಪೋರ್ಟ್​ ಮಾಡ್ತಿದ್ದೀವಿ. ಅಮ್ಮನ ಪರ ಮಕ್ಕಳು ನಿಂತರೇ ತಪ್ಪಾಗಿ ಮಾತಾಡ್ತಾರೆ. ಹೌದು ಅಮ್ಮನ ಪರ ಜೋಡೆತ್ತುಗಳ ಥರ ನಿಂತಿದ್ದೇವೆ. ಈಗ ಅವರ ಪರ ನಿಂತಿದ್ದೇವೆ ಏನ್​ ಅಣ್ಣಾ ಈಗ? ಕುಮಾರಣ್ಣನಿಗೆ ಧನ್ಯವಾದ ಹೇಳಲು ಇಷ್ಟ ಪಡ್ತೇನೆ. ನನ್ನನ್ನು ಕೇವಲ 10 ಜನ ಮಾತ್ರ ‘ಡಿ’ ಬಾಸ್​ ಅಂತಿದ್ರು. ಕುಮಾರಣ್ಣನಿಂದ ಇಡೀ ಕರ್ನಾಟಕ ‘ಡಿ’ ಬಾಸ್ ಅಂತಿದೆ” ಎಂದರು.

‘ನನ್ನಂಥಾ ಕಚಡ ನನ್ಮಗ ಇನ್ನೊಬ್ಬ ಹುಟ್ಟೋಕೆ ಸಾಧ್ಯವಿಲ್ಲ’ ಅಂತ ದರ್ಶನ್ ಹೇಳಿದ್ದೇಕೆ?

RELATED ARTICLES

Related Articles

TRENDING ARTICLES