ಛತ್ತೀಸ್ಗಢ ವಿಧಾಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 15 ವರ್ಷದ ಬಿಜೆಪಿ ಆಡಳಿತವನ್ನು ಕೊನೆಗೊಳಿಸಿ, ಆಡಳಿತ ಚುಕ್ಕಾಣಿಯನ್ನು ಹಿಡಿದಿದೆ.
90 ಕ್ಷೇತ್ರಗಳಲ್ಲಿ ಕಾಂಗ್ರೆಸ್ 67 ಸ್ಥಾನದೊಂದಿಗೆ ಆಡಳಿತವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಬಿಜೆಪಿ 18 ಸ್ಥಾನವನ್ನು ಮಾತ್ರ ಪಡೆದು ಹೀನಾಯ ಸೋಲನುಭವಿಸಿದೆ. ಸೋಲಿನಿಂದ ಮುಖ್ಯಮಂತ್ರಿ ರಮಣ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಅವರು, ‘ಸತತ 3 ಬಾರಿ ಆಡಳಿತ ನಡೆಸೋಕೆ ಜನ ಅವಕಾಶ ಮಾಡಿಕೊಟ್ಟಿದ್ರು. ನನ್ನ ಜೀವನ ಪೂರ್ತಿ ಕೆಲಸ ಮಾಡಿದ್ರೂ ಅವರು ನಂಗೆ ನೀಡಿರೋ ಪ್ರೀತಿ-ಗೌರವವನ್ನು ಹಿಂತಿರುಗಿಸಲು ಆಗಲ್ಲ’ ಅಂದ್ರು.
ಬಿಜೆಪಿಯ 15 ವರ್ಷದ ಆಡಳಿತ ಕೊನೆಗೊಳಿಸಿದ ಕಾಂಗ್ರೆಸ್..!
TRENDING ARTICLES