Saturday, November 23, 2024

ಕೊನೇ ಕ್ಷಣದಲ್ಲಿ ರಾಣೆಬೆನ್ನೂರಿಗೆ ಅಚ್ಚರಿಯ ಅಭ್ಯರ್ಥಿ ಆಯ್ಕೆ – ಬಿಜೆಪಿಯ ಈ ರಣಕಲಿ ಯಾರು ಗೊತ್ತಾ?

ರಾಣೆಬೆನ್ನೂರು : ತೀವ್ರ ಕುತೂಹಲ ಮೂಡಿಸಿದ್ದ ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಘೊಷಣೆಯಾಗಿದೆ. ಕೊನೇ ಕ್ಷಣದಲ್ಲಿ ಅಚ್ಚರಿಯ ಆಯ್ಕೆ ಎಂಬಂತೆ ಬಿಜೆಪಿ ಅರುಣ್​ ಕುಮಾರ್ ಪೂಜಾರ್​ ಅವರಿಗೆ ಟಿಕೆಟ್​​ ನೀಡಿದೆ. ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿಗೆ ತೆರಳಿದ ಅರುಣ್​ ಕುಮಾರ್ ಪೂಜಾರ್. ಬಿ ಫಾರಂ ಪಡೆದು ಸಿಎಂ ಬಿಎಸ್​ವೈ ಭೇಟಿ ಮಾಡಿ, ಧನ್ಯವಾದ ತಿಳಿಸಿದ್ರು.
ಯಾರು ಈ ಅರುಣ್​ ಕುಮಾರ್​? : ಅರುಣ್​ ಕುಮಾರ್ ಪೂಜಾರ್ ಚುನಾವಣಾ ಅಖಾಡಕ್ಕೆ ಹೊಸಬರೇನು ಅಲ್ಲ. 2013ರಲ್ಲಿ ರಾಣೆಬೆನ್ನೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ರು. ಆದರೆ, ಮತದಾರರು ಅರುಣ್ ಕೈ ಹಿಡಿದಿರಲಿಲ್ಲ. ಕೊನೇ ಕ್ಷಣದಲ್ಲಿ ಬೈ ಎಲೆಕ್ಷನ್​ ಅಖಾಡದಲ್ಲಿ ಸೆಣೆಸಲು ಚಾನ್ಸ್​ ಗಿಟ್ಟಿಸಿಕೊಂಡಿರೋ ಅರುಣ್ ಅವರಿಗೆ ಉಪ ಚುನಾವಣೆ ಅಗ್ನಿಪರೀಕ್ಷೆಯಾಗಿದೆ.
ಅರುಣ್​​ ಕುಮಾರ್​ ಪೂಜಾರ್​​ ಸಚಿವರಾದ ಜಗದೀಶ್​ ಶೆಟ್ಟರ್ ಮತ್ತು ಬಸವರಾಜ್​ ಬೊಮ್ಮಾಯಿ ಅವರ ಪರಮಾಪ್ತ. ಪಂಚಮಸಾಲಿ ಸಮಾಜದ ಮುಖಂಡರಾಗಿರುವ ಇವರು ಆರೆಸ್ಸೆಸ್ಸಿನ ನಿಷ್ಠಾವಂತ ಕಾರ್ಯಕರ್ತ ಕೂಡ ಹೌದು. ಅಲ್ಲದೆ ಇವರ ಪತ್ನಿ ರಾಣೆಬೆನ್ನೂರು ಜಿಲ್ಲಾ ಪಂಚಾಯತ್​ ಸದಸ್ಯೆ. 2018 ರ ಚುನಾವಣೆಯಲ್ಲಿ ಟಿಕೆಟ್​ ಆಕಾಂಕ್ಷಿಯಾಗಿದ್ದ ಅರುಣ್​ ಕುಮಾರ್​, ಟಿಕೆಟ್​ ಸಿಗದ್ದಕ್ಕೆ ಕಣ್ಣೀರು ಹಾಕಿದ್ದರು. ಇದೇ ಸಂದರ್ಭ ರೊಚ್ಚಿಗೆದ್ದಿದ್ದ ಅರುಣ್​ ಕುಮಾರ್​ ಅವರ ಅಭಿಮಾನಿಗಳು ಸಿ.ಎಂ ಉದಾಸಿ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಈಗ ಉಪಚುನಾವಣೆ ಹಿನ್ನೆಲೆಯಲ್ಲಿ ರಾಣೆಬೆನ್ನೂರು ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಗೆ ರಚಿಸಿದ್ದ ಮೂವರು ಸದಸ್ಯರ ಸಮಿತಿ ಅರುಣ್​ ಕುಮಾರ್​ ಅವರನ್ನು ಆಯ್ಕೆ ಮಾಡಿದೆ.

ಟಿಕೆಟ್ ತಪ್ಪಿದ್ದಕ್ಕೆ ಆರ್ ಶಂಕರ್ ಹೀಗನ್ನೋದಾ? ಬೆಂಬಲಿಗರು ಫುಲ್ ಗರಂ!

RELATED ARTICLES

Related Articles

TRENDING ARTICLES