Sunday, January 26, 2025

ರಾಮನಗರದ ಮೊದಲ ಶಾಸಕಿಯಾದ ಅನಿತಾ ಕುಮಾರಸ್ವಾಮಿ..!

ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ರಾಮನಗರದ ಮೊದಲ ಶಾಸಕಿ ಆಗಿದ್ದಾರೆ.
ರಾಮನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆ ರಿಸೆಲ್ಟ್ ಬಂದಿದ್ದು. ಅನಿತಾಕುಮಾರ ಸ್ವಾಮಿ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದಾರೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುಟುಂಬದಿಂದ 3ನೇ ಪ್ರತಿನಿಧಿಯಾಗಿ ರಾಮನಗರದ ಶಾಸಕಿಯಾಗಿ‌ ಅನಿತಾ ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಅವರು ವೋಟಿಂಗ್ ಗೆ ಕೇವಲ 48 ಗಂಟೆ ಇರುವಾಗ ಕಣದಿಂದ ಹಿಂದೆ ಸರಿದಿದ್ರು. ನೆಪಕಷ್ಟೇ ಅವರ ಹೆಸರು ಇತ್ತಷ್ಟೇ. ನಿರೀಕ್ಷೆಗೆ ತಕ್ಕಂತೆ ಸಿಎಂ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರ ಸ್ವಾಮಿ ಅವರ ಕೊರಳಿಗೆ ರಾಮನಗರ ಮತದಾರರು ವಿಜಯದ ಮಾಲೆ ಹಾಕಿದ್ದಾರೆ. ಇದರೊಂದಿಗೆ ಅನಿತಾ ಕುಮಾರಸ್ವಾಮಿ 2ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. 1,25,043 ಪಡೆದಿರುವ ಅವರು 1,09,13 ಅಂತರದ ಗೆಲುವು ಪಡೆದಿದ್ದಾರೆ. ವೋಟಿಂಗ್ ಗೂ ಮುನ್ನವೇ ಚುನಾವಣಾ ಕಣದಿಂದ ಹಿಂದೆ ಸರಿದಿದ್ದ ಚಂದ್ರಶೇಖರ್ ಅವರಿಗೆ 15,906 ಮತಗಳನ್ನು ಪಡೆದಿದ್ದಾರೆ. ಇದರೊಂದಿಗೆ ಅನಿತಾ ಕುಮಾರಸ್ವಾಮಿಯವ್ರು ರಾಮನಗರದ ಮೊದಲ ಮಹಿಳಾ ಎಂಎಲ್ ಎ ಅನ್ನೋ ಕೀರ್ತಿಗೆ ಪಾತ್ರರಾಗಿದ್ದಾರೆ. 

 

RELATED ARTICLES

Related Articles

TRENDING ARTICLES