Friday, November 22, 2024

ಕರ್ನಾಟಕದಿಂದ ಪ್ರಧಾನಿ ಮೋದಿ ಸ್ಪರ್ಧೆ..! ಕ್ಷೇತ್ರ ಯಾವ್ದು ಗೊತ್ತಾ?

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಕರ್ನಾಟಕದಿಂದ ಸ್ಪರ್ಧೆ ಮಾಡಲಿದ್ದಾರೆ ಅನ್ನೋ ಸೂಪರ್ ಡೂಪರ್ ಎಕ್ಸ್​ಕ್ಲೂಸಿವ್​ ನ್ಯೂಸ್​ ಅನ್ನು ಪವರ್​ ಟಿವಿ ಬ್ರೇಕ್ ಮಾಡಿದೆ.
ಇದು ಲೋಕಸಭಾ ಚುನಾವಣೆಯ ಅತೀ ದೊಡ್ಡ ಎಕ್ಸ್​ಕ್ಲೂಸಿವ್​ ಸುದ್ದಿಯಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಮೋದಿ ಕಣಕ್ಕೆ ಇಳಿಯುತ್ತಿದ್ದಾರೆ. ಇಂದು ಸಂಜೆ ವೇಳೆಗೆ ಅಧಿಕೃತ ಘೋಷಣೆ ಹೊರ ಬೀಳುವ ಸಾಧ್ಯತೆ ಇದೆ.
ಬೆಂಗಳೂರು ದಕ್ಷಿಣ ಬಿಜೆಪಿಯ ಭದ್ರಕೋಟೆ. ಇದು ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್​ ಕುಮಾರ್ ಅವರು 1996ರಿಂದ 2014ರವರೆಗೆ ಸತತವಾಗಿ ಜಯ ಸಾಧಸಿದ್ದ ಕ್ಷೇತ್ರ.
ಮೋದಿ ಸ್ಪರ್ಧೆ ಮೂಲಕ ‘ಮೈತ್ರಿ’ ಪಾಳಯಕ್ಕೆ ಬಿಜೆಪಿ ಸವಾಲೆಸೆದಿದೆ. ಕರ್ನಾಟಕದಿಂದ ಮೋದಿ ಕಣಕ್ಕಿಳಿಯುವ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಬಲಪಡಿಸುವ ರಣತಂತ್ರ ಬಿಜೆಪಿಯದ್ದಾಗಿದೆ.
ಬೆಂಗಳೂರು ದಕ್ಷಿಣದಿಂದ ದಿ.ಅನಂತ್​ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ​ಕುಮಾರ್​ ಅವರು ಕಣಕ್ಕಿಳಿಯುತ್ತಾರೆ ಅನ್ನೋದು ಬಹುತೇಕ ಕನ್ಫರ್ಮ್ ಆಗಿತ್ತು. ಹೈಕಮಾಂಡ್​ಗೆ ರಾಜ್ಯ ನಾಯಕರು ತೇಜಸ್ವಿನಿ ಅನಂತ್​ಕುಮಾರ್​ ಅವರ ಹೆಸರನ್ನೇ ನೀಡಿದ್ದರು. ಆದರೆ, ನಿನ್ನೆ ಬಿಡುಗಡೆಯಾದ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಈ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಕಣಕ್ಕಿಳಿಯುವುದರಿಂದ ನಿನ್ನೆ ಅಭ್ಯರ್ಥಿಯ ಹೆಸರನ್ನು ಅನೌನ್ಸ್ ಮಾಡಿರಲಿಲ್ಲ. ಇಂದು ಮೋದಿ ಸ್ಪರ್ಧೆ ಘೋಷಣೆ ಆಗಲಿದೆ.

RELATED ARTICLES

Related Articles

TRENDING ARTICLES