ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ದೇಶಾದ್ಯಂತ ಒಟ್ಟು 543 ಕ್ಷೇತ್ರಗಳ ಪೈಕಿ 184 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಘೋಷಿಸಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ 21 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಕೊಪ್ಪಳ ಕ್ಷೇತ್ರಕ್ಕೆ ಅಭ್ಯರ್ಥಿಯ ಹೆಸರನ್ನು ಘೋಷಿಸಿಲ್ಲ. ಅಲ್ಲಿ ಬಿಜೆಪಿಯ ಕರಡಿ ಸಂಗಣ್ಣ ಹಾಲಿ ಸಂಸದರಾಗಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರೇ ಅಭ್ಯರ್ಥಿ ಎನ್ನಲಾಗಿತ್ತು. ಆದರೆ ಅವರ ಹೆಸರನ್ನೂ ಘೋಷಿಸಿಲ್ಲ. ನಿನ್ನೆ ಮೊನ್ನೆ ಪಕ್ಷಕ್ಕೆ ಸೇರಿರುವ ಉಮೇಶ್ ಜಾಧವ್, ಎ. ಮಂಜು ಅವರಿಗೆ ಪಕ್ಷ ಮಣೆ ಹಾಕಿದೆ. ಆದ್ರೆ, ಪಕ್ಷಕ್ಕಾಗಿ ಹತ್ತಾರು ವರ್ಷದಿಂದ ದುಡಿದವರಿಗೆ ಟಿಕೆಟ್ ನೀಡಿಲ್ಲ ಅನ್ನೋ ಆರೋಪಕ್ಕೂ ಪಕ್ಷ ತುತ್ತಾಗಿದೆ. ಇನ್ನು ಮಂಡ್ಯ ರಣಕಣದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಮರನಾಥ್ ಅವರಿಗೆ ಬೆಂಬಲ ಸೂಚಿಸುವುದು ಬಹುತೇಕ ಖಚಿತ.
ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ:
ಬೆಂಗಳೂರು ಉತ್ತರ : ಡಿ.ವಿ.ಸದಾನಂದ ಗೌಡ
ಬೆಂಗಳೂರು ಕೇಂದ್ರ : ಪಿ.ಸಿ. ಮೋಹನ್
ತುಮಕೂರು : ಜಿ.ಎಸ್.ಬಸವರಾಜ್
ಉಡುಪಿ-ಚಿಕ್ಕಮಗಳೂರು : ಶೋಭಾ ಕರಂದ್ಲಾಜೆ
ಚಿಕ್ಕಬಳ್ಳಾಪುರ : ಬಿ.ಎನ್. ಬಚ್ಚೇಗೌಡ
ಬೀದರ್ : ಭಗವಂತ್ ಖೂಬಾ
ಹಾವೇರಿ : ಶಿವಕುಮಾರ್ ಉದಾಸಿ
ಬಾಗಲಕೋಟೆ : ಪಿ.ಸಿ.ಗದ್ದೀಗೌಡರ್
ಬೆಳಗಾವಿ : ಸುರೇಶ್ ಅಂಗಡಿ
ದಕ್ಷಿಣ ಕನ್ನಡ : ನಳಿನ್ ಕುಮಾರ್ ಕಟೀಲ್
ಮೈಸೂರು-ಕೊಡಗು: ಪ್ರತಾಪ್ ಸಿಂಹ
ಕಲಬುರಗಿ: ಡಾ. ಉಮೇಶ್ ಜಾಧವ್
ವಿಜಯಪುರ: ರಮೇಶ್ ಜಿಗಜಿಣಗಿ
ಶಿವಮೊಗ್ಗ: ಬಿ.ವೈ.ರಾಘವೇಂದ್ರ
ಧಾರವಾಡ: ಪ್ರಹ್ಲಾದ್ ಜೋಶಿ
ಬಳ್ಳಾರಿ: ದೇವೇಂದ್ರಪ್ಪ
ದಾವಣಗೆರೆ: ಜಿ.ಎಂ. ಸಿದ್ದೇಶ್ವರ್
ಚಿತ್ರದುರ್ಗ: ನಾರಾಯಣಸ್ವಾಮಿ
ಹಾಸನ: ಎ.ಮಂಜು
ಚಾಮರಾಜನಗರ: ಶ್ರೀನಿವಾಸ್ ಪ್ರಸಾದ್
ಉತ್ತರ ಕನ್ನಡ: ಅನಂತ್ಕುಮಾರ್ ಹೆಗಡೆ
ಪಟ್ಟಿ ರಿಲೀಸ್ ಆಗದ 7 ಕ್ಷೇತ್ರಗಳು
1) ಬೆಂಗಳೂರು ದಕ್ಷಿಣ
2) ಬೆಂಗಳೂರು ಗ್ರಾಮಾಂತರ
3) ರಾಯಚೂರು
4) ಚಿಕ್ಕೋಡಿ
5) ಕೋಲಾರ
6) ಕೊಪ್ಪಳ
7) ಮಂಡ್ಯ
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ದಿ. ಅನಂತಕುಮಾರ್ ಪತ್ನಿ ತೇಜಸ್ವಿನಿ ಅಭ್ಯರ್ಥಿ ಎನ್ನಲಾಗಿತ್ತು. ಆದರೆ ಅಭ್ಯರ್ಥಿ ಪಟ್ಟಿಯಲ್ಲಿ ಅವರ ಹೆಸರಿನ್ನೂ ಫೈನಲ್ ಆಗಿಲ್ಲ. ಬೆಂಗಳೂರು ಗ್ರಾಮಾಂತರದಿಂದ ನಿಶಾ ಯೋಗೇಶ್ವರ್, ರಾಯಚೂರಿನಿಂದ ಅಮರೇಗೌಡ ನಾಯಕ್, ತಿಪ್ಪರಾಜು, ಚಿಕ್ಕೋಡಿಯಲ್ಲಿ ರಮೇಶ್ ಕತ್ತಿ, ಅಪ್ಪಾ ಸಾಹೇಬ್ ಜೊಲ್ಲೆ , ಕೋಲಾರದಿಂದ ಡಿ.ಎಸ್.ವೀರಯ್ಯ, ಛಲವಾದಿ ನಾರಾಯಣಸ್ವಾಮಿ, ಕೊಪ್ಪಳದಿಂದ ಹಾಲಿ ಸಂಸದ ಕರಡಿ ಸಂಗಣ್ಣ, ಮಂಡ್ಯದಲ್ಲಿ ಅಶ್ವಥ್ ನಾರಾಯಣ್ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.