ಶಿವಮೊಗ್ಗ: ಮೋದಿ ಅವರು ಸಂಸತ್ನಲ್ಲಿ ಹೆಚ್ಚು ಮಾತನಾಡಲು ಅವಕಾಶ ನೀಡಿಲ್ಲ. ಮಾತನಾಡಲು ಕೇವಲ 2 ರಿಂದ 3 ನಿಮಿಷ ಕಾಲಾವಕಾಶ ನೀಡುತ್ತಾರೆ ಅಂತ ಮಾಜಿ ಪ್ರಾಧಾನಿ ಹೆಚ್. ಡಿ ದೇವೇಗೌಡ ಅವರು ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ದೇವೇಗೌಡರು, “ಪ್ರಧಾನಿ ಮೋದಿ ತಮ್ಮ ನಡವಳಿಕೆಯನ್ನು ಸುಧಾರಿಸಿಕೊಳ್ಳಬೇಕು. ಮೋದಿ ದೇಶವನ್ನ ಎಲ್ಲಿಗೆ ಕೊಂಡೊಯ್ಯಲಿದ್ದಾರೆ ಅನ್ನೋ ಅನುಮಾನ ಶುರುವಾಗಿದೆ. ನನಗೆ ರಾಜಕೀಯ ವ್ಯಾಮೋಹವಿಲ್ಲ, ನಾನು ಜಾತಿ ವಿರೋಧಿ ಅಲ್ಲ. ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿಯವರು ಅಪಹಾಸ್ಯ ಮಾಡುತ್ತಿದ್ದಾರೆ” ಅಂತ ಆರೋಪಿಸಿದ್ದಾರೆ. ಬಿಜೆಪಿ ಭದ್ರಕೋಟೆ ಶಿವಮೊಗ್ಗದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಿದ ದೇವೇಗೌಡರು, ತಮ್ಮ ಮೊಮ್ಮಕ್ಕಳ ಗೆಲುವಿಗೆ ಶ್ರಮಿಸುವಷ್ಟೇ, ಮಧು ಗೆಲುವಿಗೂ ಶ್ರಮಿಸುವುದಾಗಿ ಹೇಳಿದ್ದಾರೆ.