Thursday, December 26, 2024

ಎ.ಮಂಜು ಕಾಂಗ್ರೆಸ್​ನಲ್ಲಿ ಹಳಸಿದ ಅನ್ನ ಇದ್ದಂತೆ ಎಂದ ಬಿಜೆಪಿ ಮುಖಂಡ..!

ಹಾಸನ : ಮಾಜಿ ಸಚಿವ ಎ. ಮಂಜು ಕಾಂಗ್ರೆಸ್​ನಲ್ಲಿ ಹಳಸಿದ ಅನ್ನ ಇದ್ದಂತೆ..! ಹೀಗಂತ ಹೇಳಿರೋದು ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾ ರಮೇಶ್.
ಎ.ಮಂಜು ಬಿಜೆಪಿ ಸೇರ್ಪಡೆಗೊಂಡು ಹಾಸನದಲ್ಲಿ ಪ್ರಜ್ವಲ್​ ರೇವಣ್ಣ ಅವರ ವಿರುದ್ಧ ಕಣಕ್ಕಿಳಿಯುತ್ತಾರೆ ಎಂಬ ಚರ್ಚೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಯೋಗಾ ರಮೇಶ್, ‘ಎ.ಮಂಜು ಕಾಂಗ್ರೆಸ್​ನಲ್ಲಿ ಹಳಸಿದ ಅನ್ನ ಇದ್ದ ಹಾಗೆ. ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಆಗುತ್ತಾ. ಈ ಹಿಂದೆ ಬಿಜೆಪಿ ಹಾಳು ಮಾಡಿ ಹೋಗಿದ್ದಾರೆ’ ಎಂದು ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES