ಚಿಕ್ಕೋಡಿ : ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಗೃಹಸಚಿವ ಎಂ.ಬಿ ಪಾಟೀಲ್ ಅವರನ್ನು ತಮ್ಮ ಟೀಚರ್ ಆಗಿ ನೇಮಿಸಿಕೊಳ್ಳುತ್ತಾರಂತೆ..!
ಈ ಹೇಳಿಕೆ ಅಚ್ಚರಿ ಅನಿಸನಿಸಿದರೂ ಸತ್ಯ. ಯಡಿಯೂರಪ್ಪ ಅವರು ಎಂ.ಬಿ ಪಾಟೀಲ್ ಅವರಿಗೆ ತಿರುಗೇಟು ನೀಡಿದ ಪರಿ ಇದು. ‘ಬಿಎಸ್ವೈಗೆ ಕಾಮನ್ ಸೆನ್ಸ್ ಇಲ್ಲ’ ಎಂಬ ಎಂ,ಬಿ ಪಾಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ ಅವರು, ‘ಹೌದು ನಂಗೆ ಕಾಮನ್ ಸೆನ್ಸ್ ಇಲ್ಲ. ಕಾಮನ್ ಸೆನ್ಸ್ ಅಂದ್ರೆ ಏನು ಅಂತ ನಂಗೆ ಹೇಳಿಕೊಡಲಿ. ಎಂ.ಬಿ ಪಾಟೀಲ್ ಅವರನ್ನು ಬೇಕಾದ್ರೆ ಟೀಚರ್ ಆಗಿ ನೇಮಿಸಿಕೊಳ್ತೀನಿ. ಅವರಿಂದ ಕಲಿಯುವಂಥದ್ದು ಬಹಳಷ್ಟಿದೆ, ಕಲಿಯೋಣ’ ಎಂದಿದ್ದಾರೆ.
ಎಂ.ಬಿ ಪಾಟೀಲ್ ಅವರನ್ನು ಟೀಚರ್ ಆಗಿ ನೇಮಿಸಿಕೊಳ್ತಾರಂತೆ ಯಡಿಯೂರಪ್ಪ..!
TRENDING ARTICLES