ಬೆಂಗಳೂರು : ಈ ಬಾರಿ ಮತ್ತೆ ಕನ್ನಡಿಗರೊಬ್ಬರು ಪ್ರಧಾನಿ ಆಗ್ತಾರೆ ಅಂತ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಿತ್ರ ಪಕ್ಷಗಳು ಒಟ್ಟಿಗೇ ಸೇರಿ 20-22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ. ಮತ್ತೊಮ್ಮೆ ಕನ್ನಡಿಗರೊಬ್ಬರು ಪ್ರಧಾನಿ ಆಗಲಿದ್ದಾರೆ. ದೇಶದಲ್ಲಿ ಏನ್ ಬೇಕಾದ್ರೂ ಆಗಬಹುದು. ಚುನಾವಣೆ ನಂತರ ಎಲ್ಲವೂ ಗೊತ್ತಾಗಲಿದೆ’ ಅಂದರು. ಹಾಗೆಯೇ ಶಿವರಾತ್ರಿ ಬಳಿಕ ಜೆಡಿಎಸ್ ಸಚಿವ ಸಂಪುಟ ವಿಸ್ತರಣೆ ವಿಚಾರ ಬರೀ ವದಂತಿ ಎಂದರು.
Karnataka CM HD Kumaraswamy on his statement "if you bless Congress & JD(S) with at least 20-22 seats in Karnataka once again, a Kannadiga can be in that place (Prime Minister)": In this country anything can happen. Why can't it happen? pic.twitter.com/ybjs56kfEA
— ANI (@ANI) February 28, 2019