ನವದೆಹಲಿ: ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಕ್ಯಾಂಪಸ್ನ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್ (SIS)ನಲ್ಲಿ ಅಪರಿಚಿತ ಕಿಡಿಗೇಡಿಗಳು ಬ್ರಾಹ್ಮಣ ವಿರೋಧಿ ನೀತಿಯ ಗೋಡೆ ಬರಹ ಬರೆದಿರುವ ಬರಹಗಳು ಪತ್ತೆಯಾಗಿವೆ.
ಜೆಎನ್ಯೂನ ವಿಭಾಗದ ತರಗತಿ ಕಟ್ಟಡ ಹಾಗೂ ಪ್ರಾಧ್ಯಾಪಕರ ಕೋಣೆಗಳಲ್ಲಿ ಈ ಬರಹ ಕಂಡು ಬಂದಿದೆ. ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್– 2 ರ ಕಟ್ಟಡ ಗೋಡೆಗಳಲ್ಲಿ ಬ್ರಾಹ್ಮಣ ಹಾಗೂ ಬನಿಯಾ ವಿರೋಧಿ ಬರಹಗಳನ್ನು ಬರೆಯಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಬ್ರಾಹ್ಮಣರೇ ಕ್ಯಾಂಪಸ್ ತೊರೆಯಿರಿ, ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ, ಬ್ರಾಹ್ಮಣರೇ, ಬನಿಯಾಗಳೇ ನಿಮಗಾಗಿ ನಾವು ಬರುತ್ತಿದ್ದೇವೆ, ಸೇಡು ತೀರಿಸಿಕೊಳ್ಳುತ್ತೇವೆ ಎನ್ನುವ ಘೋಷಣೆಗಳನ್ನು ಸ್ಕೂಲ್ ಆಫ್ ಇಂಟರ್‌ನ್ಯಾಷನಲ್ ಸ್ಟಡೀಸ್‌ನ ತರಗತಿ ಕಟ್ಟಡದ ಗೋಡೆಗಳಲ್ಲಿ ಬರೆಯಲಾಗಿದೆ.
ಜೆಎನ್‌ಯು ಉಪಕುಲಪತಿ ಪ್ರೊ. ಶಾಂತಿಶ್ರೀ ಡಿ.ಪಂಡಿತ್ ಅವರ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಬಗ್ಗೆ ಸೂಕ್ತ ತನಿಖೆಗೆ ನೀಡಲಾಗಿದೆ. ಎಸ್‌ಐಎಸ್, ಜೆಎನ್‌ಯು ಗೋಡೆಗಳನ್ನು “ಬ್ರಾಹ್ಮಣ ವಿರೋಧಿ” ಘೋಷಣೆಗಳಿಂದ ಬರೆದಿರುವ ಬರಹವನ್ನ ನಾವು ಖಂಡಿಸುತ್ತೇವೆ ಎಂದಿದ್ದಾರೆ.