Monday, December 23, 2024

ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕಾಲೇಜು; ಸಿಎಂ ಭೇಟಿಯಾಗಲಿರುವ ಶ್ರೀರಾಮ ಸೇನೆ

ಬೆಂಗಳೂರು: ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕಾಲೇಜು ವಿಚಾರವಾಗಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಶ್ರೀರಾಮ ಸೇನೆ ಭೇಟಿ ಮಾಡಲಿದೆ.

ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶಾಲೆ ಮಾಡಿಕೊಡುವುದಾದ್ರೆ ನಮ್ಮ ಹಿಂದೂ ಮಕ್ಕಳಿಗೂ ಕೇಸರಿ ಶಾಲೆ ಮಾಡಿಕೊಡಿ
ಕಾಲೇಜಿಗೆ ಕೇಸರಿ ಬಣ್ಣ ಬಳಿದಿರಬೇಕು, ವಿದ್ಯಾರ್ಥಿಗಳಿಗೆ ಕೇಸರಿ ಬಣ್ಣದ ಸಮವಸ್ತ್ರ, ಫೋಟೋಗಳು ಹಿಂದೂ ಧರ್ಮದ್ದು, ಪಾಠ ಹಿಂದೂ ಧರ್ಮದ್ದಿರಬೇಕು ಎಂದು ಹೀಗಿ ಶ್ರೀರಾಮ ಸೇನೆ ಸಿಎಂ ಅವರಿಗೆ ಮನವಿ ಮಾಡಲಿದೆ.

ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೆ ನಮ್ಮ ದೇಶದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಸಮಸ್ಯೆ ಆಗ್ತಿರೋದು ಹಿಂದೂ ಹೆಣ್ಣು ಮಕ್ಕಳಿಗೆ
ಪ್ರತ್ಯೇಕ ಶಾಲೆ ಬೇಕು ಅನ್ನೋರು ಪಾಕಿಸ್ತಾನಕ್ಕೆ ಹೋಗಲಿ. ಮದರಸಾದಲ್ಲಿ ಭಯೊತ್ಪಾದನೆ ಚಟುವಟಿಕೆಗೆ ಕುಮ್ಮಕ್ಕು ಕೊಡುವಂತೆ ಪ್ರತ್ಯೇಕ ಶಾಲೆ ಮಾಡಿ ಇನ್ನಿತರ ಚುವಟಿಕೆಗೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂದು ಸಿಎಂ ಗೆ ವಿಷಯವನ್ನ ಮನವಿ ಮಾಡಲಿದೆ.

RELATED ARTICLES

Related Articles

TRENDING ARTICLES