ನವದೆಹಲಿ: ಸ್ಪೋಟಕ ಬ್ಯಾಟ್ಸಮನ್ ಸಂಜು ಸ್ಯಾಮ್ಸನ್ ಅವರ ಕ್ರಿಕೆಟ್ ಜೀವನ ಕ್ರಿಕಟ್ ಪಂಡಿತರಲ್ಲಿ ಅಚ್ಚರಿ ಮೂಡಿಸಿದೆ. ಅವರು ಬ್ಯಾಟಿಂಗ್ನಲ್ಲಿ ಸತತವಾಗಿ ಯಶಸ್ಸು ಕಾಣುತ್ತಿದ್ದರು, ಅವರನ್ನ ನ್ಯೂಜಿಲೆಂಡ್ ವಿರುದ್ಧ ಆಡುವ ಬಳಗದಲ್ಲಿ ಸೇರಿಸದ ಕಾರಣಕ್ಕೆ ಅವ್ರ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಅದರಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ಬಿಸಿಸಿಐ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನ್ಯೂಜಿಲೆಂಡ್ ಏಕದಿನ ಪ್ರವಾಸಕ್ಕೆ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಬೆಂಚ್ ಮೇಲೆ ಕುಳಿತುಕೊಳ್ಳುತ್ತಾರೆ. ಅವರಿಗೆ ಭಾರತಕ್ಕಾಗಿ ಆಡಲು ಸಾಕಷ್ಟು ಅವಕಾಶವನ್ನು ನೀಡುತ್ತಿಲ್ಲ. ಭಾರತ ತಂಡಕ್ಕೆ ಪಾದಾರ್ಪಣೆ ಮಾಡುವ ಮೊದಲು, ಸ್ಯಾಮ್ಸನ್ ಮಾಜಿ ನಾಯಕ ಎಂ.ಎಸ್ ಧೋನಿಯ ಸಂಭಾವ್ಯ ಉತ್ತರಾಧಿಕಾರಿಯಾಗಿ ಕಂಡುಬಂದರು, ಆದರೆ ಪರಿಸ್ಥಿತಿಯು ಆ ರೀತಿಯಲ್ಲಿ ಹೊರಹೊಮ್ಮಲಿಲ್ಲ ಮತ್ತು ಪರಿಸ್ಥಿತಿಯು ಬದಲಾಗುವ ಸಾಧ್ಯತೆಯಿಲ್ಲ ಎಂದು ಕಿಡಿಕಾರಿದ್ದಾರೆ.
ಸೀಮಿತ ಅವಕಾಶಗಳಲ್ಲಿ ಉತ್ತಮವಾಗಿ ಸ್ಯಾಮ್ಸನ್ ಆಡುತ್ತಿದ್ದರೂ ಮತ್ತು 2022 ರಲ್ಲಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರೂ, ಅವರು ಬೆಂಚ್‌ನಲ್ಲಿಯೇ ಉಳಿದಿದ್ದಾರೆ. ಕ್ರೈಸ್ಟ್‌ಚರ್ಚ್‌ನಲ್ಲಿ ಇಂದು ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಡುವ 11 ಬಳಗ ಬದಲಾಗಿ ಸ್ಯಾಮ್ಸನ್ ಬೆಂಚ್ ಕಾಯಿಸಿದ್ದಕ್ಕೆ ಜನರನ್ನು ಕೆರಳಿಸಿತು.
ಮೂರನೇ ಏಕದಿನ ಮೊದಲು ವಿವಿಎಸ್ ಲಕ್ಷ್ಮಣ್ ಅವರ ಸಂದರ್ಶನವನ್ನು ಉಲ್ಲೇಖಿಸಿದ ಶಶಿ ತರೂರ್, ರಿಷಬ್ ಪಂತ್ ಉತ್ತಮ ಆಟಗಾರನಾಗಿದ್ದರೂ, ಅವರು ತಮ್ಮ ಕೊನೆಯ 11 ಇನ್ನಿಂಗ್ಸ್‌ಗಳಲ್ಲಿ 10 ಪಂಧ್ಯಗಳಲ್ಲಿ ವಿಫಲರಾಗಿದ್ದಾರೆ. ಆದರೆ 2022 ರಲ್ಲಿ 71 ಮತ್ತು ಅವರ ಏಕದಿನ ವೃತ್ತಿಜೀವನದಲ್ಲಿ 66 ರ ಸರಾಸರಿ ಹೊಂದಿರುವ ಸ್ಯಾಮ್ಸನ್ ಅವರು ಸ್ಕೋರ್ ಮಾಡಿದ್ದಾರೆ ಎಂದು ಪ್ರತಿಪಾದಿಸಿದರು. ಅವರ ಕೊನೆಯ ಐದು ಪಂದ್ಯಗಳಲ್ಲಿ ಎಲ್ಲಾ ಐದು ಪಂದ್ಯಗಳಲ್ಲಿ ಉತ್ತಮ ರನ್ ಕಲೆಹಾಕಿದರು ಭಾರತ ತಂಡದ ಆಡುವ ಬಳಗದಲ್ಲಿ ಅವರಿಗೆ ಸ್ಥಾನ ನೀಡಿಲ್ಲ ಎಂದರು.
ಸಂಜು ಸ್ಯಾಮ್ಸನ್ ಅವರ 66 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ ಆದರೂ ಅವರನ್ನ ಇನ್ನೂ ಬೆಂಚ್‌ನಲ್ಲಿ ಇಡಲಾಗಿದೆ. ಸ್ಯಾಮ್ಸನ್‌ಗಾಗಿ ಪ್ರಪಂಚದಾದ್ಯಂತದ ಅಭಿಮಾನಿಗಳು ಇದ್ದಾರೆ ಎಂದು ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿದ್ದಕ್ಕಾಗಿ ಶಶಿ ತರೂರ್ ಭಾರತ ತಂಡದ ಆಡಳಿತವನ್ನು ಟೀಕಿಸಿದರು.