Sunday, November 17, 2024

ಶಬರಿಮಲೆ ವಾವರ್ ಮಸೀದಿ ವಿವಾದ ಮತ್ತೆ ಆರಂಭ

ಬೆಂಗಳೂರು : ಹಿಂದೂಗಳು ವಾವರ್ ಮಸೀದಿಗೆ ಹೋಗದಂತೆ ಹಿಂದೂ ಜನ ಜಾಗೃತಿ ಸಮಿತಿ ರಾಜ್ಯ ಸಂಚಾಲಕ ಮೋಹನ್ ಗೌಡ ಮನವಿ ಮಾಡಿದ್ದಾರೆ.

ಈಗಾಗಲೇ ಶಬರಿಮಲೆ ಅಯ್ಯಪ್ಪ ಸ್ವಾಮೀಯ ವ್ರತ ಆರಂಭವಾಗಿದೆ. ನಾವು ಶಬರಿಮಲೆಗೆ ಹೋಗುವಾಗ ಘೋರ ತಪ್ಪನ್ನು ಮಾಡ್ತಿದ್ದೀವಿ. ವಾವರ್ ಮಸೀದಿಗೆ ಹೋಗುವಂತ ಕೆಟ್ಟ ಸಂಪ್ರದಾಯ ಇತ್ತೀಚೆಗೆ ಶುರುವಾಗಿದೆ. ವಾವರ್ ಒಬ್ಬ ಬಾಬರ್ ಆಗಿದ್ದ, ಒಬ್ಬ ಮುಸ್ಲಿಂ ಆಗಿದ್ದ. ಒಬ್ಬ ಕಳ್ಳನನ್ನ ಅಯ್ಯಪ್ಪ ಸ್ವಾಮೀಯ ಸ್ನೇಹಿತ ಎಂದು ಬಿಂಬಿಸಿದ್ದಾರೆ. ಅವನ ಘೋರಿಯನ್ನು ಮಸೀದಿಯನ್ನಾಗಿ ಮಾಡಿದ್ದಾರೆ. ಹಿಂದೂಗಳು ಕೋಟಿಗಟ್ಟಲೇ ಹಣವನ್ನು ಆ ಮಸೀದಿಗೆ ಸುರಿಯುತ್ತಿದ್ದಾರೆ. ಇದು ಹಿಂದೂ ಧರ್ಮಕ್ಕೆ ಅಯ್ಯಪ್ಪನಿಗೆ ಮಾಡಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು, ಹಿಂದೂಗಳ ಮೂರ್ತಿ ಪೂಜೆಯನ್ನು ಒಪ್ಪದ ಒಬ್ಬ ಮುಸ್ಲಿಂ ವಾವರ್, ಹೇಗೆ ಅಯ್ಯಪ್ಪ ಸ್ವಾಮಿ ಭಕ್ತ ಆಗಲು ಸಾಧ್ಯವಿದೆ..? ಅಯ್ಯಪ್ಪ ಸ್ವಾಮೀಗೂ ವಾವರ್‌ ಮಸೀದಿಗೂ ಏನು ಸಂಬಂಧವಿದೆ? ಯಾವುದೇ ಕಾರಣಕ್ಕೂ ಹಿಂದೂಗಳು ವಾವರ್ ಮಸೀದಿಗೆ ಕಾಣಿಕೆ ನೀಡಬಾರದು, ನಾವು ಶಬರಿಮಲೆಗೆ ಹೋಗಿ ಅಯ್ಯಪ್ಪಸ್ವಾಮಿ ದರ್ಶನ ಮಾತ್ರ ಪಡೆಯಬೇಕು. ಎಂದು ಹಿಂದೂ ಜನ ಜಾಗೃತಿ ಸಮಿತಿ ರಾಜ್ಯ ಸಂಚಾಲಕ ಮೋಹನ್ ಗೌಡ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES