Thursday, November 7, 2024

ಓಲಾ, ಉಬರ್‌ ಆಟೋಗಳಿಗೆ ಶೇ.5 ಕಮಿಷನ್‌ ದರ ನಿಗದಿ!

ಬೆಂಗಳೂರು : ಸಾರಿಗೆ ಇಲಾಖೆ ಓಲಾ, ಉಬರ್ ಹಾಗೂ ರ್ಯಾಪಿಡೋ ಆಟೋಗಳಿಗೆ ಪರಿಷ್ಕೃತ ದರ ಫಿಕ್ಸ್ ಮಾಡಿ ಆದೇಶ ಹೊರಡಿಸಿದೆ. ಹೈಕೋರ್ಟ್ ಸೂಚನೆಯಂತೆ ಸಭೆ ನಡೆಸಿ ಸಾರಿಗೆ ಇಲಾಖೆ ದರವನ್ನು ನಿಗದಿ ಮಾಡಿದೆ.ಮಿನಿಮಮ್ ಚಾರ್ಜ್ ಜೊತೆಗೆ ಶೇ.5ರಷ್ಟು ದರವನ್ನು ಫಿಕ್ಸ್ ಮಾಡಿದ್ದು, ಮಿನಿಮಮ್ ಚಾರ್ಜ್ 30, 40, 60 ಇದ್ರು ಅದ್ರ ಜೊತೆಗೆ +5% ಮಾತ್ರ ಹೆಚ್ಚಿಸಲಾಗಿದೆ.30 ರೂಪಾಯಿಗೆ 5 % ಹೆಚ್ಚಿನ ದರದ ಜೊತೆಗೆ + 5% ಜಿಎಸ್ಟಿ ಸೇರಿಸಲು ಆದೇಶ ನೀಡಲಾಗಿದೆ. ಇದರ ಆದೇಶದ ಪ್ರತಿಯನ್ನು ಹೈಕೋರ್ಟ್​ಗೆ ಸಾರಿಗೆ ಇಲಾಖೆಯೇ ಸಲ್ಲಿಕೆ ಮಾಡಲಿದೆ. ಆದ್ರೆ, ಆಟೋ ಯೂನಿಯನ್‌ಗಳು ಸಾರಿಗೆ ಇಲಾಖೆಯ ನಡೆಗೆ ವಿರೋಧ ಹೊರಹಾಕಿದ್ದಾರೆ .

ಇನ್ನು ಇತ್ತ ಕೆಲ ಯೂನಿಯನ್‌ಗಳು ಓಲಾ ಉಬರ್‌ಗೆ ಆಟೋ ನಡೆಸುವ ಪರ್ಮಿಟ್ ಇಲ್ಲ .. ಮೊದಲು ಸಾರಿಗೆ ಇಲಾಖೆ ಇದನ್ನು ತಡೆಯಬೇಕು ಅಂದ್ರು .. ಇನ್ನು ಶೇ .10 % ಬುಕಿಂಗ್ ಜಾರ್ಜ್ ವಿಚಾರವಾಗಿ ಸರ್ಕಾರ ಈಗ ದರ ನಿಗದಿ ಮಾಡಿರೊದನ್ನು ನ.28 ಸೋಮವಾರದಂದು ಹೈಕೋರ್ಟ್‌ನಲ್ಲಿ ನಡೆಯಲಿದೆ.ಅಲ್ಲಿಯವರೆಗೆ ಹೆಚ್ಚುವರಿ ಶುಲ್ಕ ಸಾರಿಗೆ ಇಲಾಖೆಗೆ ವಿಧಿಸುವ ಅಧಿಕಾರ ಇಲ್ಲ ಅಂದ್ರು .

ಒಟ್ಟಿನಲ್ಲಿ ಅಗತ್ಯ ವಸ್ತುಗಳು ಹಾಗೂ ಅಗತ್ಯ ಸೇವೆಗಳು ದಿನೇ ದಿನೇ ದುಬಾರಿಯಾಗುತ್ತಿವೆ. ಈಗಾಗಲೇ ಬೆಲೆ ಏರಿಕೆಗೆ ಕಂಗಾಲಾದ ಜನರಿಗೆ ಪದೇಪದೇ ಆಘಾತವಾಗುತ್ತಿದೆ. ಸೋಮವಾರ ಹೈಕೋರ್ಟ್ ಈ ವಿಚಾರವಾಗಿ ಯಾವ ತೀರ್ಮಾನ ತೆಗೆದುಕೊಳ್ಳುತ್ತೆ ಅಂತ ಕಾದು ನೋಡಬೇಕಿದೆ.

ಸ್ವಾತಿ ಪುಲಗಂಟಿ ಮೆಟ್ರೋ ಬ್ಯೂರೋ ಬೆಂಗಳೂರು.

RELATED ARTICLES

Related Articles

TRENDING ARTICLES