Monday, December 23, 2024

ಜಗಳ ಬಿಡಿಸಲು ಹೋದವನ ಬರ್ಬರ ಹತ್ಯೆ

ಕಲಬುರಗಿ : ಅಂದು ನವೆಂಬರ್​​​​ 11ರ ರಾತ್ರಿ ಸುಮಾರು 10 ಗಂಟೆ. ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕಿಣ್ಣಿ ತಾಂಡಾದ ನಿವಾಸಿ ಆನಂದ್​ ಬೈಕ್​​ನಲ್ಲಿ ಮನೆಗೆ ತೆರಳ್ತಿದ್ದ. ಆದರೆ, ಅಲ್ಲೊಂದು ಯುವಕರ ಗುಂಪು ಆಟೋ ಚಾಲಕನೊಂದಿಗೆ ಜಗಳಕ್ಕೆ ಇಳಿದಿದ್ರು. ಇದನ್ನು ಕಂಡ ಆನಂದ್​​​​ ಆಟೋ ಚಾಲಕನ ಪರವಾಗಿ ಮಾತನಾಡಿ, ಜಗಳ ಬಿಡಿಸಲು ಮುಂದಾದ.. ಇಷ್ಟಕ್ಕೆ ರೊಚ್ಚಿಗೆದ್ದ ಪುಂಡರು, ಆನಂದ್​​ ಮೇಲೆ ಹಲ್ಲೆಗೆ ಮುಂದಾಗ್ತಾರೆ. ಎಚ್ಚೆತ್ತ ಆನಂದ್,​​ ಭೀಮಸಿಂಗ್​​ಗೆ ಚಾಕುವಿನಿಂದ ಇರಿದ. ಸಿಟ್ಟಿಗೆದ್ದ ಪುಂಡರು ಅದೇ ಚಾಕುವನ್ನು ಕಸಿದು ಆನಂದ್​​​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಆನಂದ್​​ ಇಹಲೋಕ ತ್ಯಜಿಸಿದ್ದ.

ಕೊಲೆ ಕೇಸ್​​​ ದಾಖಲಿಸಿಕೊಂಡ ಪೊಲೀಸರು ಭೀಮಸಿಂಗ್, ಸಚಿನ್, ಸೋನು ರಾಠೊಡ್, ವಾಹಬ್ ಪಟೇಲ್, ಗೌಡಪ್ಪ, ಅಮಿತ್ ಎಂಬುವವರನ್ನು ಬಂಧಿಸಿದ್ದಾರೆ. ದುರಂತ ಅಂದ್ರೆ ಇವರೆಲ್ಲರೂ ಕೊಲೆಯಾದ ಆನಂದ್​​ನ ಗ್ರಾಮದವರೇ ಆಗಿದ್ದಾರೆ. ​​​ಆನಂದ್ ಚಹ್ವಾಣ್ ಮತ್ತು ಭೀಮಸಿಂಗ್ ಕುಟುಂಬಗಳ ಮಧ್ಯೆ ನಾಲ್ಕೈದು ವರ್ಷಗಳಿಂದ ಜಾಗದ ವಿಚಾರಕ್ಕೆ ಗಲಾಟೆ ನಡೀತಿತ್ತು. ಆನಂದ್ ಚಹ್ವಾಣ್ ಮತ್ತು ಭೀಮಸಿಂಗ್ ಒಬ್ಬರ ಮೇಲೊಬ್ಬರು ಕತ್ತಿ ಮಸಿಯೋದಕ್ಕೆ ಮುಂದಾಗಿದ್ದರು. ಸಿಕ್ಕಿದ್ದೇ ಚಾನ್ಸ್​​​ ಎಂದು ಕೊಂಡ ಭೀಮಸಿಂಗ್​ ಆ್ಯಂಡ್​​​​ ಗ್ಯಾಂಗ್​​​​ ಆನಂದ್​​​ನ ಕಥೆ ಮುಗಿಸಿದ್ರು.

ಎರಡು ಕುಟುಂಬಗಳ ಮಧ್ಯೆ ಏನೇ ಗಲಾಟೆಗಳಿದ್ರೂ ಮಾತಿನಲ್ಲಿ ಬಗೆಹರಿಸಬಹುದಿತ್ತು.ಇಲ್ಲಾ ಕಾನೂನು ಹೋರಾಟ ಮಾಡಬಹುದಿತ್ತು. ಆದರೆ, ದ್ವೇಷದಿಂದ ಕೊಲೆ ನಡೆದಿದ್ದು, ಆನಂದ್​​​ ಪತ್ನಿ ಮತ್ತು ಇಬ್ಬರು ಮಕ್ಕಳು ಮಾತ್ರ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಅನಿಲ್‌ಸ್ವಾಮಿ, ಪವರ್ ಟಿವಿ, ಕಲಬುರಗಿ

RELATED ARTICLES

Related Articles

TRENDING ARTICLES