ಮಂಗಳೂರು : ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಗ್ರ ಶಾರೀಕ್ ಬಂಧನ ಮಾಡಲಾಗಿತ್ತು. ತೀವ್ರ ವಿಚಾರಣೆ ನಡೆಸಿದಾಗ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಒಂದು ವೇಳೆ ಆಟೋದಲ್ಲಿ ಕುಕ್ಕರ್ ಬ್ಲಾಸ್ಟ್ ಆಗದೇ ಇದ್ದಿದ್ರೆ ಮಂಗಳೂರಿನ ಪ್ರಸಿದ್ಧ ದೇಗುಲಗಳು, ಬಸ್ ನಿಲ್ದಾಣ ಹಾಗೂ ಆರ್ಎಸ್ಎಸ್ ಕಚೇರಿ ಶಾರೀಕ್ನ ಟಾರ್ಗೆಟ್ ಆಗಿತ್ತು ಎನ್ನುವ ಆಘಾತಕಾರಿ ಅಂಶಗಳು ಪೊಲೀಸ್ ತನಿಖೆ ವೇಳೆ ಹೊರಬಂದಿವೆ.ಇದರಿಂದ ಇಡೀ ಮಂಗಳೂರು ಮಾತ್ರವಲ್ಲ ಕರ್ನಾಟಕವೇ ಬೆಚ್ಚಿಬಿದ್ದಿದೆ.
ಉಗ್ರ ಶಾರೀಕ್ ವಿರುದ್ಧ UAPA ಕಾಯ್ದೆ ಅನ್ವಯ ಕೇಸ್ ದಾಖಲು ಮಾಡಲಾಗಿದ್ದು , ಪ್ರಕರಣದ ತೀವ್ರತೆ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ NIAಗೆ ಕೇಸ್ ವರ್ಗಾವಣೆ ಮಾಡಲಾಗಿದ್ದು, ಇಂದು NIA ಅಧಿಕಾರಿಗಳು ಶಾರೀಕ್ ನ ತೀವ್ರ ವಿಚಾರಣೆ ಒಳಪಡಿಸಿದ್ದಾರೆ.