ಇದು ಒಂದು ಕಾಲೇಜ್ನ ಕಥೆಯಲ್ಲ. ಇದೊಂದು ದಂಧೆಯಾಗಿ ಬೆಂಗಳೂರಿನ ಹಲವು ಕಡೆ ನಡೆಯುತ್ತಿದೆ. ನಮ್ಮ ಪವರ್ ತಂಡ ಹಲವು ಕಾಲೇಜ್ಗಳ ಮೇಲೆ ದಾಳಿ ನಡೆಸಿ, ಅಕ್ರಮ ಬಯಲಿಗೆಳೆದಿದೆ. ಫರ್ಹಾನ್, ಅಲ್ ಫರ್ಹಾನ್, ಇಂಡಿಯನ್ ಅಕಾಡೆಮಿ ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ ನರ್ಸಿಂಗ್ GNM ಮೊದಲ ವರ್ಷದ ಪರೀಕ್ಷೆ ನಡೆಯುತ್ತಿದ್ದು, ಅಲ್ಲೂ ಸಾಮೂಹಿಕ ಕಾಪಿ ನಡೆಯುತ್ತಿತ್ತು. ಪರೀಕ್ಷೆ ನಡೆಯುತ್ತಿದ್ರೂ ಕಾಲೇಜ್ ಸಿಬ್ಬಂದಿ ಗೇಟ್ ಲಾಕ್ ಮಾಡಿಕೊಂಡಿದ್ರು. ಪರೀಕ್ಷಾ ಕೇಂದ್ರ ಪ್ರವೇಶಿಸಿದ ಪವರ್ ತಂಡವನ್ನ ಕಾಲೇಜ್ ಸಿಬ್ಬಂದಿ ತಡೆದಿದೆ.
ಪರೀಕ್ಷಾ ಹಾಲ್ಗೆ ನಮ್ಮ ತಂಡ ನುಗ್ಗಿದ ನಂತರ ಅಸಲಿ ವಿಷಯ ಹೊರಬಿದ್ದಿದೆ. ಆಶ್ಚರ್ಯ ಅಂದ್ರೆ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಕಾಲೇಜ್ ಹೆಸರೇ ಗೊತ್ತಿರಲಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಪರೀಕ್ಷೆ ಬರೆಯಲು ಸ್ಟೂಡೆಂಟ್ಸ್ ಬಂದಿದ್ದು, ಕಾಲೇಜ್ ಸಿಬ್ಬಂದಿಗಳೇ ಉತ್ತರಗಳ ಹಾಳೆಯನ್ನು ನೀಡಿದ್ರು. ಫರ್ಹಾನ್ ನರ್ಸಿಂಗ್ ಕಾಲೇಜ್ನಲ್ಲಿ ಪರೀಕ್ಷಾ ಮೇಲ್ವಿಚಾರಕಿ ಮೊಬೈಲ್ ಮೂಲಕ ಉತ್ತರ ಹೇಳಿಕೊಡ್ತಿ್ದು, ರೆಡ್ ಹ್ಯಾಂಡ್ ಆಗಿ SIT ಬಲೆಗೆ ಬಿದ್ದಿದ್ದಾರೆ. ಫರ್ಹಾನ್ ನರ್ಸಿಂಗ್ ಕಾಲೇಜ್ನ ಪರೀಕ್ಷಾ ಅಕ್ರಮ ಸಿಸಿಟಿವಿಯಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ಕಾಪಿ ಕಳ್ಳಾಟ ಪತ್ತೆಯಾಗಿದೆ.