ಹಾವೇರಿ : ಸಿಎಂ ಬೊಮ್ಮಾಯಿ ಅವರ ರಾಜಕೀಯ ತವರು ಹಾವೇರಿಯಲ್ಲಿ ಜನವರಿ 6, 7 ಹಾಗೂ 8ರಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕರುನಾಡಿನಾದ್ಯಂತ ಸಂಚರಿಸಲು ಕನ್ನಡದ ರಥವನ್ನು ತಯಾರಿ ಮಾಡಲಾಗ್ತಿದೆ. ಡಿಸೆಂಬರ್ 1 ರಂದು ಕನ್ನಡ ತೇರಿನ ಯಾತ್ರೆ ಆರಂಭವಾಗಲಿದ್ದು, ಇಡೀ ಕರ್ನಾಟಕವನ್ನು ಸುತ್ತಲಿದೆ.
ಜಾನಪದ ವಿಶ್ವ ವಿದ್ಯಾಲಯದಲ್ಲಿ H.S. ಮುದಕವಿಯವರ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಕಲಾವಿದರು ಕಳೆದ 15 ದಿನಗಳಿಂದ ಕನ್ನಡದ ರಥವನ್ನ ಸಿದ್ದಗೊಳಿಸುತ್ತಿದ್ದಾರೆ. ಈ ರಥದಲ್ಲಿ ಕನ್ನಡಾಂಬೆಯ ಮೂರ್ತಿ, ಕರುನಾಡಿನ ಚಿತ್ರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರವನ್ನು ಅಳವಡಿಸಲಾಗಿದೆ.
ಇದೇ ಮೊದಲ ಬಾರಿಗೆ ಕನ್ನಡದ ರಥ ಕರುನಾಡಿನ ತುಂಬೆಲ್ಲಾ ಸಂಚರಿಸುತ್ತಿದ್ದು, ಅಕ್ಷರ ಜಾತ್ರೆಗೆ ಹೊಸ ಪರಂಪರೆಯನ್ನು ಹುಟ್ಟಿ ಹಾಕಿದಂತಾಗಿದೆ.
ವೀರೇಶ ಬಾರ್ಕಿ,ಪವರ್ ಟಿವಿ ಹಾವೇರಿ