ರಾಜ್ಯದಲ್ಲಿ ಚುನಾವಣಾ ಚಟುವಟಿಕೆಗಳು ಗರಿಗೆದರಿದೆ. ಪ್ರತಿಯೊಂದು ರಾಜಕೀಯ ಪಕ್ಷಗಳು ಮತ ಸೆಳೆಯಲು ವಿಭಿನ್ನ ಪ್ರಯತ್ನ ಮಾಡ್ತಿವೆ. ರಾಜ್ಯ BJP ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತೊಂದು ವಿಭಿನ್ನ ಅಭಿಯಾನ ಆರಂಭಿಸಿದೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೆ 40% ಕಮಿಷನ್ ಸದ್ದು ಮಾಡ್ತಿದೆ. ಫೇಸ್ಬುಕ್ 40% ಸರ್ಕಾರ ಎಂದು ಪೇಜ್ ರಚನೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ರೀತಿಯಲ್ಲಿ ಅಭಿಯಾನ ಆರಂಭಿಸಿದೆ. ಈ ಪೇಜ್ಗೆ ಲಕ್ಷಾಂತರ ಫಾಲೋವರ್ಸ್ ಸಹ ಇದ್ದಾರೆ. 40% ಸರ್ಕಾರ ಫೇಸ್ಬುಕ್ ಪೇಜ್ನಲ್ಲಿ ಕಾಂಗ್ರೆಸ್ ಹೆಲ್ಪ್ಲೈನ್ ನಂಬರ್ ಸಹ ಹಾಕಲಾಗಿದೆ.
40% ಕಮಿಷನ್ ರೋಡಲ್ಲಿ ಯಮಗುಂಡಿಗಳ ದರ್ಬಾರ್ ನಡೆಯುತ್ತಿದ್ದು, ಯಾಮಾರಿ ಬಿದ್ರೆ ಮುಗೀತು ಜೀವನ ಬಂಡಿ ಎಂದು ಪೋಸ್ಟರ್ ಹಾಕಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮರಕ್ಕೆ ನಿಂತಿದೆ. ಸಿಎಂ ಬೊಮ್ಮಾಯಿ ಅವರನ್ನು ಯಮನಂತೆ ಪೋಸ್ಟರ್ ರಚಿಸಿ ಶೇರ್ ಮಾಡಿದೆ. ವಿವಿಧ ಸಿನಿಮಾಗಳ ಹೆಸರಿನ ಮೂಲಕ ಸಿಎಂ ಹಾಗೂ ಸಚಿವರನ್ನು ಲೇವಡಿ ಮಾಡಲಾಗಿದೆ. ಸಿಎಂ ಹಾಗೂ ಸಚಿವ ಅಶ್ವತ್ಥ್ ನಾರಾಯಣ್ರನ್ನು ಕಿಲಾಡಿ ಜೋಡಿ, ಸಚಿವ ಸೋಮಣ್ಣರನ್ನು ಸರ್ವರ್ ಸೋಮಣ್ಣ ಎಂದು ಪೋಸ್ಟ್ ಹಾಕಿ ವ್ಯಂಗ್ಯವಾಡಿದೆ.