ಮಂಗಳೂರು : ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಬಟ್ಟೆ ವ್ಯಾಪಾರಿ ಶಾರೀಕ್ ಯುವಕರನ್ನ ಉಗ್ರ ಚಟುವಟಿಕೆಗೆ ಸೆಳೆಯುತ್ತಿದ್ದ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ನಗರದಲ್ಲಿ ರಕ್ಕಪಿಪಾಸು ಶಾರೀಕ್ ಮಾಡ್ತಿದ್ದ ಕೆಲಸವೇನು? ಯಾರ್ಯಾರ ಜೊತೆ ನಂಟು ಹೊಂದಿದ್ದ ಉಗ್ರ ಶಾರೀಕ್? ಟ್ರಯಲ್ ಬ್ಲಾಸ್ಟ್ ಬಳಿಕ ಉಗ್ರ ಶಾರೀಕ್ ಎಲ್ಲಿ ಹೋಗಿದ್ದ? ಎಂದು ಪ್ರಶ್ನೆಯಾಗಿಯೇ ಉಳಿದಿದೆ. ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಬಟ್ಟೆ ವ್ಯಾಪಾರಿಯಾಗಿದ್ದ ಶಾರೀಕ್, ಮಲೆನಾಡು, ಕರಾವಳಿ ಭಾಗದ ಯುವಕರನ್ನು ಈತ ಉಗ್ರ ಚಟುವಟಿಕೆಗೆ ಸೆಳೆಯುತ್ತಿದ್ದ.
ಇನ್ನು, ಉಗ್ರ ಸಂಘಟನೆ ಪರ ಗೋಡೆ ಬರಹ ಬರೆದು ಜೈಲುಪಾಲಾಗಿದ್ದ, ಗೋಡೆ ಬರಹ ಕೇಸ್‌ನಲ್ಲಿ ಜಾಮೀನಿನ ಮೇಲೆ ರಿಲೀಸ್ ಆಗಿದ್ದ. ಈತ ರಿಲೀಸ್ ನಂತರ ತಂದೆ ಜೊತೆ ಸೇರಿ ಬಟ್ಟೆ ಅಂಗಡಿ ನಡೆಸ್ತಿದ್ದ, ಇದೇ ವೇಳೆ ಬಾಂಬ್ ತಯಾರಿಕೆ ಆರಂಭಿಸಿದ್ದ ಶಂಕಿತ ಶಾರೀಕ್, ಮಾಜ್, ಯಾಸಿನ್ ಜೊತೆ ಸೇರಿ ಬಾಂಬ್ ತಯಾರಿಸುತ್ತಿದ್ದ. ತುಂಗಾನದಿ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಿದ್ದ ಶಾರೀಕ್, ಸಿಕ್ಕಿಬೀಳುವ ಭಯದಿಂದ ಎಸ್ಕೇಪ್ ಆಗಿದ್ದ.