ಬೆಂಗಳೂರು : ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಡೇ ಕೇರ್ ಸೆಂಟರ್ನ್ನ ನಿರ್ಮಾಣ ಮಾಡಿದೆ. ನಗರದ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಮಕ್ಕಳ ಲಾಲನೆ, ಪಾಲನೆಗಾಗಿ ಡೇ ಕೇರ್ ಸೆಂಟರ್ ನಿರ್ಮಾಣ ಮಾಡಿದ್ದಾರೆ.ವಿನೂತನ ಶೈಲಿಯ ನೆಲದ ಹಾಸಿಗೆ, ರಬ್ಬರ್ ಮ್ಯಾಟ್, ಡೈನಿಂಗ್ ಟೇಬಲ್, ಜಾರು ಬಂಡಿ, ಬಾಸ್ಕೆಟ್ ಬಾಲ್ ಆಡಲು ವ್ಯವಸ್ಥೆ ಮಾಡಲಾಗಿದೆ. ಅಂಬೆಗಾಲಿಡುವ ಮಕ್ಕಳಿಂದ ಹಿಡಿದು ಪ್ರಾಥಮಿಕ ಶಾಲೆ ಪ್ರವೇಶಿಸುವ ವಿದ್ಯಾರ್ಥಿಗಳ ಹಂತದವರೆಗೆ ಉಪಚಾರಕ್ಕಾಗಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇನ್ನು ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿ ಡೇ-ಕೇರ್ ಸೆಂಟರ್ ಮಾಡಿರುವುದಕ್ಕೆ ತುಂಬಾ ಖುಷಿ ವ್ಯಕ್ತಪಡಿಸಿದ್ದಾರೆ. ನಾವು ಮುಂಚೆ ಮಕ್ಕಳ ಖಾಸಗಿ ಡೇ ಕೇರ್ ಸೆಂಟರ್ನಲ್ಲಿ ಬಿಟ್ಟು ಬರ್ತಿದ್ವಿ, ಅಲ್ಲಿ ನಮಗೆ ಭಯವಾಗ್ತಿತ್ತು. ಆರೋಗ್ಯ ಇಲಾಖೆ ಹಾಗೂ ಸರ್ಕಾರ ನಮಗೆ ಉಚಿತವಾಗಿ ಡೇ ಕೇರ್ ಮಾಡಿ ಕೊಟ್ಟಿದ್ದು, ತಂದೆ-ತಾಯಿ ಜೊತೆ ಬೆರೆಯಲು, ಬೆಳೆಯಲು ಅನುವಾಗಲಿದೆ ಅಂತಿದ್ದಾರೆ ಸಿಬ್ಬಂದಿ.
ಇದ್ರಿಂದ ಉದ್ಯೋಗದಲ್ಲಿರುವ ದಂಪತಿಗೆ, ಅದರಲ್ಲೂ ನಿರ್ದಿಷ್ಟವಾಗಿ ಹತ್ತು ವರ್ಷ ವಯೋಮಿತಿಯೊಳಗಿನ ಮಕ್ಕಳನ್ನು ಹೊಂದಿರುವ ಪಾಲಕರಿಗೆ ಅನುಕೂಲವಾಗಲಿದೆ.
ಸ್ವಾತಿ ಪುಲಗಂಟಿ, ಮೆಟ್ರೋ ಬ್ಯೂರೋ ಪವರ್ ಟಿವಿ ಬೆಂಗಳೂರು