ಬೀದರ; ಬೃಹತ್ ಗಾತ್ರದ ಹೆಬ್ಬಾವು ಜೀವಂತ ಮೇಕೆ ನುಂಗಿ ಪರದಾಡಿದ ಘಟನೆ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಘಾಡಹಿಪ್ಪರ್ಗಾ ಗ್ರಾಮದಲ್ಲಿ ನಡೆದಿದೆ.
ಘಾಟಹಿಪ್ಪರ್ಗಾ ಗ್ರಾಮದ ವ್ಯಾಪ್ತಿಯಲ್ಲಿ ಕುರುಗಾಹಿ ರಾಜಕುಮಾರ ರೊಡ್ಡೆ ಎಂಬುವರಿಗೆ ಸೇರಿದ ಗುಡ್ಡದಲ್ಲಿ ಮೇಯತ್ತಿದ್ದ ಮೇಕೆಯೊಂದನ್ನ 10 ಅಡಿಯಷ್ಟು ಉದ್ದದ ಹೆಬ್ಬಾವು ದಾಳಿ ನಡೆಸಿ ನುಂಗಿದೆ. ಭಯಗೋಂಡ ಕುರಿಗಾಹಿ ರಾಜಕುಮಾರ ಗ್ರಾಮಸ್ಥರಿಗೆ ವಿಷಯ ತಿಳಿಸಿದ ಮೇಲೆ ಉರಗ ತಜ್ಞ ಬಂದು ಮೇಕೆಯನ್ನ ರಕ್ಷಿಸಿದ್ದಾನೆ. ಆದರೆ, ಅಷ್ಟೊತ್ತಿಗೆ ಮೆಕೆ ಸಾವಿಗೀಡಾಗಿದೆ.
ಇನ್ನು ಸ್ಥಳಕ್ಕೆ ಬಂದ ಉರಗ ತಜ್ಞ ಅಶೋಕಶೆಟ್ಟಿ ಜೊತೆಗೆ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿದರು. ಹೆಬ್ಬಾವಿಗೆ ತೊಂದರೆ ನೀಡದೆ ಅರಣ್ಯ ಪ್ರದೇಶದ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.