ಮೈಸೂರು: ಸತತ ಒಂದು ತಿಂಗಳಿನಿಂದ ಚೆಳ್ಳೆ ಹಣ್ಣು ತಿನ್ನಿಸುತ್ತಿದ್ದ ಮೊಸಳೆಯನ್ನ ಕಡೆಗೂ ಕಾರ್ಯಾಚರಣೆ ನಡೆಸಿ ಮೊಸಳೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರಿನ ರಾಮಾನುಜ ರಸ್ತೆಯ ಮೋರಿಯಲ್ಲಿ ಹಾಗಾಗ ಮೊಸಳೆ ಕಾಣಿಸಿಕೊಳ್ಳುತ್ತಿತ್ತು. ಸಾರ್ವಜನಿಕರ ದೂರು ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಸಿಬ್ಬಂದಿ, ವನ್ಯಜೀವಿ ಸಂರಕ್ಷಕ ಯಶಸ್ವಿಯಾಗಿದ್ದಾರೆ.
ರಾಜ ಕಾಲುವೆಯ ಕೊಳಚೆ ನೀರಿನಲ್ಲಿ ಕಾಣಿಸಿಕೊಂಡ ಮೊಸಳೆ ಇದೇ ಜಾಗದಲ್ಲಿ ಪದೇಷದೇ ಕಾಣಿಸಿಕೊಂಡಿತ್ತು. ಆದರೆ. ಕೊಳಚೆ ನೀರಿನಲ್ಲಿ ಮೊಸಳೆಯ ಇರುವು ಪತ್ತೆ ಮಾಡಲೂ ಕಷ್ಟವಾಗುತ್ತಿತ್ತು. ಎಲೆತೋಟದ ಬಳಿ ಅಡಿಕೆ ತೋಟದ ಮಧ್ಯೆಯೇ ಕೊಳಚೆ. ನೀರು ಹಾದುಹೋಗುತ್ತಿದ್ದು ಅಕ್ಕಪಕ್ಕ ಪೊದೆಗಳು ಬೆಳೆದು ನಿಂತಿದ್ದರಿಂದ ಕಾರ್ಯಾಚರಣೆ ಸವಾಲಿನ ಕೆಲಸವಾಗಿತ್ತು.
ಈ ಕಾರಣದಿಂದ ಜೆಸಿಬಿ ಬಳಸಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಸ್ಥಳೀಯರ ಪ್ರಕಾರ ಈ ಜಾಗದಲ್ಲಿ ಒಂದಕ್ಕಿಂತ ಹೆಚ್ಚು ಮೊಸಳಗಳಿವೆ ಎನ್ನಲಾಗುತ್ತಿದೆ. ಇದೀಗ ಸರೆಯಾಗಿರುವ ಮೊಸಳೆ ಸುಮಾರು ಆರು ಅಡಿಗಳಷ್ಟು ಉದ್ದವಿದೆ. ಇನ್ನು ಈ ಮೊಸಳೆ ಹಿಡಿದ ಹಿನ್ನಲೆಯಲ್ಲಿ ಅಲ್ಲಿನ ನಿವಾಸಿಗರು ನಿಟ್ಟುಸಿರುಬಿಟ್ಟಿದ್ದಾರೆ.