Friday, November 8, 2024

ಕೊಟ್ಟ ಮಾತು ತಪ್ಪಿದ್ಯಾ BBMP..?

ಬೆಂಗಳೂರು : ಕೆಲವು ದಿನಗಳ ಹಿಂದೆಯಷ್ಟೇ ವಿದ್ಯಾರಣ್ಯಪುರದ ನಿವಾಸಿ ಸಂದೀಪ್ ಫ್ರೆಂಡ್ಸ್ ಜೊತೆ ಕ್ರಿಕೆಟ್ ಹಾಡ್ಕೊಂಡು ಜಾಲಹಳ್ಳಿಯ ಗಂಗಮ್ಮ ರಸ್ತೆ ಮಾರ್ಗವಾಗಿ ಬೈಕ್‌ನಲ್ಲಿ ಬರ್ತಾ ಇರ್ತಾರೆ. ಅದೇ ದಾರಿಯಲ್ಲಿ ಯಮವಾಗಿದ್ದ ಗುಂಡಿಯೊಂದನ್ನ ತಪ್ಪಿಸಲು ಹೋದ ಸಂದೀಪ್ ಕೆಳ್ಗೆ ಬಿದ್ದು ಗಂಭೀರ ಗಾಯವಾಗಿ ಹತ್ತಿರದ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಾಗಿರ್ತಾರೆ. ಸಂದೀಪ್ ಪತ್ನಿ ಸೀಮಾ ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ವಿರುದ್ದ ದೂರು ನೀಡಿರ್ತಾರೆ.

ಇತ್ತ ಪೆಟ್ಟು ಬಿದ್ದು ಚಿಂತಾಜನಕ ಸ್ಥಿತಿ ತಲುಪಿ ಸಾವು-ಬದುಕು ನಡುವೆ ಹೋರಾಡ್ತಿದ್ದ ಸಂದೀಪ್ ಕೊನೆಗೆ ಈಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಮ್ಮ ಬಿಬಿಎಂಪಿ ಅಧಿಕಾರಿಗಳು ಮಾಡಿರೋ ಬೇಜವಾಬ್ದಾರಿ ಕೆಲಸಕ್ಕೆ ಬೈಕ್ ಸವಾರ ಸಂದೀಪ್ ಆಸ್ಪತ್ರೆಗೆ ಕಟ್ಟಿದ್ದು ಬರೋಬ್ಬರಿ 14. ಲಕ್ಷ ರೂಪಾಯಿ. ಮಧ್ಯಮ ವರ್ಗ ಕುಟುಂಬದವರಾಗಿರೋ ಸಂದೀಪ್ ಕುಟುಂಬ ಈಗ ಹೆಚ್ಚಿನ ಚಿಕಿತ್ಸೆಗೆ ಹಣ ಇಲ್ಲದೆ ಪರದಾಡ್ತಿದ್ದಾರೆ. ಅವರ ಪತ್ನಿ ಸೀಮಾ ಗೋಳಾಡ್ತಾ ಇದ್ದಾರೆ. ಒಂದ್ಕಡೆ ನಿಮ್ಹಾನ್ಸ್ ಗೆ ಶಿಫ್ಟ್ ಮಾಡೋಣ ಅಂದ್ರೆ ಅಲ್ಲಿ ಬೆಡ್ ಇಲ್ಲ. ಇ ಎಸ್ ಐ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ವಂತೆ. ನಮಗೆ ಏನ್ ಮಾಡ್ಬೇಕ್ ಅಂತ ಗೊತ್ತಾಗ್ತಿಲ್ಲ. ಬಿಬಿಎಂಪಿ ಅಧಿಕಾರಿಗಳು ನಮ್ಮ ಸಹಾಯಕ್ಕೆ ಬರ್ತಿಲ್ಲ ಅಂತ ತಮ್ಮ ನೋವನ್ನು ತೋಡ್ಕೊಂಡಿದ್ದಾರೆ.

ಏನೇ ಆಗ್ಲಿ ನಮ್ಮ ಸರ್ಕಾರ ನೊಂದವರ ಪರ ಜನಸಾಮಾನ್ಯರ ಆಶಾಕಿರಣ ಅಂತ ಎದೆ ತಟ್ಟಿ ಹೇಳ್ಕೊಳೋ ನಮ್ಮ ಜನನಾಯಕರು ಇಂಥಾ ಜನರ ಪಾಲಿಗೆ ಏನ್ ನೆರವಾಗ್ತಾರೋ ಕಾದು ನೋಡಬೇಕಾಗಿದೆ.

ಅಶ್ವಥ್ ಎಸ್. ಎನ್.ಕ್ರೈಂ ಬ್ಯೂರೋ ಪವರ್ ಟಿವಿ

RELATED ARTICLES

Related Articles

TRENDING ARTICLES