ನವದೆಹಲಿ : ದೇಶದ ರಾಜದಾನಿಯಲ್ಲಿ ನಡೆದ ಭಯಂಕರ ಶ್ರದ್ದಾ ಕೊಲೆ ಪ್ರಕರಣದ ಆರೋಪಿಯನ್ನು 5 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಇಂದು ನವದೆಹಲಿಯ ವಿಡಿಯೋ ಕಾನ್ಪರೆನ್ಸ್ ಮೂಲಕ ಸಾಕೇತ್ ಕೋರ್ಟ್ ಗೆ ಕೊಲೆ ಆರೋಪಿ ಅಪ್ತಾಬ್ನನ್ನು, ಒಳಪಡಿಸಲಾಗಿತ್ತು. ಈ ವೇಳೆ ತೀರ್ಪು ನೀಡಿದ ಸಾಕೇತ್ ಕೋರ್ಟ್ ಆರೋಪಿಯಾದ ಅಪ್ತಾಬ್ನನ್ನು, 5 ದಿನ ಮಂಪರು ಪರೀಕ್ಷೆಗೆ ಒಳಪಡಿಸಿ ಪೊಲೀಸ್ ಕಷ್ಟಡಿಗೆ ನೀಡಲಾಗಿದೆ.
ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಇವರು ಪರಸ್ಪರ ಪ್ರೀತಿಸತೊಡಗಿದರು. ಬಳಿಕ ಶ್ರದ್ದಾಳ ಮನೆಯಲ್ಲಿ ಒಪ್ಪದ ಕಾರಣ ಆಕೆ ತನ್ನ ಬಟ್ಟೆಗಳನ್ನು ತೆಗೆದುಕೊಂಡು ಅಪ್ತಾಬ್ ಜೊತೆ ವಾಸಿಸಲು ಮನೆ ಬಿಟ್ಟು ಬಂದಳು ಆದರೆ ಆಕೆಯ ಈ ನಿರ್ಧಾರವೇ ಆಕೆಯ ಪ್ರಾಣವನ್ನು ಬಲಿ ಪಡೆದುಕೊಂಡಿತು.