ಮೈಸೂರು: ಗುಂಬಜ್ ಮಾದರಿಯ ವಿನ್ಯಾಸದಿಂದ ವಿವಾದಕ್ಕೆ ಕಾರಣವಾಗಿರುವ ಮೈಸೂರಿನ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜು ಬಳಿಯ ಬಸ್ ನಿಲ್ದಾಣವಕ್ಕೆ ರಾತ್ರೋ ರಾತ್ರಿ ಬಣ್ಣವನ್ನ ಮೈಸೂರು ಮಹಾನಗರ ಪಾಲಿಕೆ ಬದಲಾವಣೆ ಮಾಡಿದೆ.
ಈ ಮೊದಲು ಗುಂಬಜ್ ಮಾದರಿಯ ಬಸ್ ನಿಲ್ದಾಣಕ್ಕೆ ಮೂರು ಗುಂಬಜ್ ಗೂ ಸಿಲ್ವರ್ ಬಣ್ಣ ಬಳಿಯಲಾಗಿತ್ತು. ಅಲ್ಲದೇ, ಈ ಮೂರರಲ್ಲಿ ನಿನ್ನೆ ಒಂದು ಗುಂಬಜ್ ಗೆ ಕೇಸರಿ ಬಣ್ಣ ಮಾತ್ರ ಬಳಿಯಲಾಗಿತ್ತು. ನಿನ್ನೆ ರಾತ್ರಿ ಉಳಿದ ಎರಡು ಗುಂಬಜ್ ಗೂ ಕೇಸರಿ ಬಣ್ಣ ಬಳಿಯಲಾಗಿದೆ.
ಮೈಸೂರಿನ ವಿವಾದಿತ ಬಸ್ ನಿಲ್ದಾಣಕ್ಕೆ ನಿನ್ನೆ ಮತ್ತೆ ರಾತ್ರೋರಾತ್ರಿ ಮಹಾನಗರ ಪಾಲಿಕೆ ಕಾರ್ಯಾಚರಣೆ ನಡೆಸಿ ಬಣ್ಣ ಬಳಿಯಲಾಗಿದೆ. ಈ ಬಸ್ ನಿಲ್ದಾಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಳಪಡೋದ್ರಿಂದ ಈ ಹಿನ್ನೆಲೆಯಲ್ಲಿ ಕೆಲಸ ನಿಲ್ಲಿಸಲು ಗುತ್ತಿಗೆದಾರನಿಗೆ ಕೆಆರ್ ಐ ಡಿ ಎಲ್ ಅಧಿಕಾರಿಗಳು ಸೂಚಿಸಿದ್ದರು. ಆದರೆ ಇದನ್ಯಾವುದೇ ಲೆಕ್ಕಿಸದೇ ರಾತ್ರೋರಾತ್ರಿ ಮತ್ತೆ ನಡೆದ ಬಣ್ಣ ಬಳಿಯುವ ಕಾರ್ಯವನ್ನ ಮಾಡಿದ್ದಾರೆ.