Thursday, December 19, 2024

ಕೈ- ಕಮಲ ಮುಖಂಡರು ತೆನೆ ಹೊರಲು ಜನತಾದಳದ ಕಡೆ ಮುಖ..!

ತುಮಕೂರು: ತುಮಕೂರು ಜಿಲ್ಲೆಯ ಶಿರಾದಲ್ಲಿ ಜೆಡಿಎಸ್ ಕಡೆ ಹೆಜ್ಜೆ ಹಾಕಿದ ಕಾಂಗ್ರೆಸ್ ಮುಖಂಡ ಕಲ್ಕೆರೆ ರವಿ ಕುಮಾರ್. ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೆ ಸಿದ್ಧರಾದ ಬಿಜೆಪಿ ಮುಖಂಡ ಎಸ್.ಆರ್.ಗೌಡ.

ಎಸ್.ಆರ್.ಗೌಡ ಮಾಜಿ ರೇಷ್ಮೆ ನಿಗಮ ಮಂಡಳಿ‌ ಅಧ್ಯಕ್ಷ. ಶಿರಾ ಉಪ‌‌ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ‌ಸೇರ್ಪಡೆಯಾಗಿದ್ದ ಕಲ್ಕೆರೆ ರವಿಕುಮಾರ್. ನಿನ್ನೆ ಸಂಜೆ ಖಾಸಗಿ ಹೋಟೆಲ್ ನಲ್ಲಿ ಇಬ್ಬರು ಮುಖಂಡರು ಜೆಡಿಎಸ್ ಸೇರ್ಪಡೆ‌ ಬಗ್ಗೆ ಸಭೆ.
ಇಂದು ಬೆಂಗಳೂರಿನ ಜೆಪಿ ಭವನದಲ್ಲಿ ಪಕ್ಷ ಸೇರ್ಪಡೆ ಬಗ್ಗೆ ಸಿದ್ಧತೆ ಮಾಡಿಕೊಳ್ಳಲಿರುವ ಮುಖಂಡರು. ಮುಂಬರುವ ವಿಧಾನ ಸಭೆ 23ರ ಚುನಾವಣೆಗೆ ಇಬ್ಬರು ಜೆಡಿಎಸ್ ಟಿಕೆಟ್ ಆಕಾಂಕ್ಷೆಗಳು.

ಶಿರಾದಲ್ಲಿ ತೆರೆ ಮರೆಯಲ್ಲಿ ಜೆಡಿಎಸ್ ಟಿಕೇಟ್ ಗಾಗಿ ಲಾಭಿ ಮಾಡುತ್ತಿದ್ದ ಮುಖಂಡರು. ನಿನ್ನೆ ನಡೆದ ಬೆಳವಣಿಗೆಯಲ್ಲಿ ಶಿರಾ ಜೆಡಿಎಸ್ ಮುಖಂಡರೊಂದಿಗೆ ಸಭೆ. ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಲಹೆಯಂತೆ ಜೆಡಿಎಸ್ ಸೇರಲು ಸಿದ್ದತೆ ನಡೆಸಿದ್ದಾರೆ ಎಂದು ಕೇಳಿಬಂದಿದೆ.

RELATED ARTICLES

Related Articles

TRENDING ARTICLES