Saturday, May 4, 2024

ಮಾಜಿ ಸಚಿವ ಆರ್ ಬಿ ತಿಮ್ಮಾಪೂರ ಹೇಳಿಕೆ ಕುತೂಹಲ ಕೆರಳಿಸಿದೆ..!

ಬಾಗಲಕೋಟೆ:ಮುಧೋಳದಲ್ಲಿ ಮಾಜಿ ಸಚಿವ ಆರ್ ಬಿ ತಿಮ್ಮಾಪೂರ ಹೇಳಿಕೆ ನೀಡಿರುವುದು ಕುತೂಹಲ ಕೆರಳಿಸಿದೆ. ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಕಬ್ಬು ಬೆಳೆಗಾರರ ಹೋರಾಟ ಮುಂದುವರೆದಿದೆ.

ಕಬ್ಬಿನ ದರ ನಿಗದಿಗಾಗಿ ರೈತರು ಪಟ್ಟು ಹಿಡಿದು ಹೋರಾಟ ಮಾಡ್ತಿದ್ದಾರೆ. ಸಕ್ಕರೆ  ಕಾರ್ಖಾನೆ ಮಾಲೀಕರ ಮತ್ತು ರೈತರ ನಡುವೆ ಘರ್ಷಣೆ ಹುಟ್ಟು ಹಾಕುತ್ತಿದ್ದಾರೆ ಸಚಿವ ಕಾರಜೋಳ. ರೈತರಿಗೆ ಸರ್ಕಾರದಿಂದ ಯೋಗ್ಯ ಬೆಲೆ ಕೊಡಿಸಲು ಆಗದಿದ್ದರೆ ನೀವು ರಾಜೀನಾಮೆ ಕೊಡಿ.

ಕ್ಷೇತ್ರದಲ್ಲಿ ರೈತರ ನ್ಯಾಯ ಯುತ ಹೋರಾಟ ಬಡಿತಿದ್ರೆ ನೀವು ಎಲ್ಲೋ ಒಂದುಕಡೆ ಹಾರಾಟದಲ್ಲಿದ್ದಿರಿ. ಸಂಕಲ್ಪ ಯಾತ್ರೆಯಲ್ಲಿದ್ದಿರಿ, ರೈತರ ಒಳ್ಳೆ ಬೆಲೆ ಕೊಡಿಸುವ ಸಂಕಲ್ಪ ಮಾಡಿ. ರೈತರು ಕೇಳಿದ 2900 ರೂ ದರ ನೀಡಿ ರೈತರ ಪರ ಇದ್ದಿನಿ ಎಂದು ಪ್ರೂವ್ ಮಾಡಿ ಕಾರಜೋಳ. ಆದಷ್ಟು ಬೇಗ ಕಾರ್ಖಾನೆ ಮಾಲೀಕರ ಮತ್ತು ರೈತರ ನಡುವಿನ ಹೋರಾಟಕ್ಕೆ ಅಂತ್ಯ ಹಾಡಬೇಕು. ಸಚಿವ ಕಾರಜೋಳ ಅವರೇ ಈ ವಿಚಾರದಲ್ಲಿ ತಾವು ಯಾಕೆ ಮೌನ ವಹಿಸಿದ್ದಿರಿ. ಸಚಿವ ಕಾರಜೋ ಅವರೇ ಹೋರಾಟದಿಂದ ಆಗುವ ಹಾನಿಯ ಹೊರೆ ನೀವೇ ಹೊರಬೇಕಾಗುತ್ತೆ ಎಂದು ಮಾಜಿ ಸಚಿವ ಆರ್ ಬಿ ತಿಮ್ಮಾಪೂರ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES