ರಾಮನಗರ: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ರಾಮನಗರ ತಾಲ್ಲೂಕಿನ ಬಿಡದಿಯಲ್ಲಿ ಹೇಳಿಕೆ ನೀಡಿದ್ದಾರೆ.
ಕೆಂಪೇಗೌಡರ ಪ್ರತಿಮೆ ಅನಾವರಣ, ದೇವಗೌಡರನ್ನ ಕಡೆಗಣಿಸಿರುವ ವಿಚಾರವಾಗಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್ಡಿಕೆ,
ಜೆಡಿಎಸ್ ನಿಂದ ಟ್ವಿಟ್ ಮಾಡಿದ್ದಾರೆ ಗಮನಿಸಿದ್ದೇನೆ.
ಕಾರ್ಯಕ್ರಮಕ್ಕೆ ದೇವೇಗೌಡರನ್ನ ಕರೆದರೋ ಇಲ್ಲವೋ ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ. ದೇವೇಗೌಡರನ್ನ ಕರೆದಿದ್ವಿ, ಕರ್ನಾಟಕದ ಅಸ್ಮಿತೆ ಎಂದು ಟ್ವಿಟ್ ಮಾಡಿದ್ದಾರೆ ಬಿಜೆಪಿಯವರು. ಬಿಜೆಪಿ ನಾಯಕರು ಹಾಗೂ ಬಿಜೆಪಿ ಪಕ್ಷಕ್ಕೆ ನಾಗರಿಕತೆ ಇದೀಯಾ
ಸಿಎಂ ಅವರು ಎಷ್ಟೋತ್ತಿಗೆ ದೂರವಾಣಿ ಕರೆ ಮಾಡಿದ್ರು.ಮೊನ್ನೆ ರಾತ್ರಿ 9.30 ಕ್ಕೆ ಕರೆ ಮಾಡಿದ್ದಾರೆ.ಮಧ್ಯರಾತ್ರಿ ಸಮಯದಲ್ಲಿ ದೇವೇಗೌಡರು ಮಲಗಿದ್ದಾಗ ಕಾಪೌಂಡಿಗೆ ಲೇಟರ್ ಕೊಟ್ಟು ಹೋಗುತ್ತಾರೆ. ಇನ್ನು ಲೆಟರ್ ನಲ್ಲಿ ದೇವೇಗೌಡರ ಹೆಸರಿಲ್ಲ. ಮಾನ್ಯರೇ ಅಂತಾ ಇದೆ. ದೇವೇಗೌಡರ ಹೆಸರನ್ನ ಕೆಳಗೆ ಹಾಕಿದ್ದಾರೆ.
ಬಿಜೆಪಿಯವರು ಕನ್ನಡವರನ್ನ ಗುಲಾಮರನ್ನಾಗಿ ಮಾಡಲು ಹೊರಟಿದ್ದಾರೆ. ಹಿಂದಿ ಹೇರಿಕೆಗಾಗಿ ಪ್ರತಿನಿತ್ಯ ಹುನ್ನಾರ ನಡೆಯುತ್ತಿದೆ
ಕರ್ನಾಟಕದ ಅಸ್ಮಿತೆ ಕಾಪಾಡುತ್ತಿರಾ. ನರೇಂದ್ರ ಮೋದಿ ಮುಂದೆ ನಿಮ್ಮ ಪರಿಸ್ಥಿತಿ ಏನಿದೆ. ರಾಜ್ಯ ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ. ಗುಲಾಮರ ರೀತಿಯಲ್ಲಿ ಕೈ ಕಟ್ಟೆ ಹಾಕಿಕೊಂಡು ನಿಂತುಕೊಳ್ಳುತ್ತಿರೀ, ಕರ್ನಾಟಕದ ಅಸ್ಮಿತೆ ಕಾಪಾಡುವ ನೈತಿಕತೆ ಇದೀಯಾ.
ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ.ಯಾರಿದ್ದಾರೆ ಅಲ್ಲಿ, ಯಾವಾನಿಗೆ ಕೊಟ್ಟಿದ್ದಾರೆ, ಸರ್ವ ನಾಶ ಮಾಡುತ್ತಿದ್ದಾರೆ.
ನಮ್ಮ ಕುಟುಂಬ ಅಂದರೆ, ದೇವೇಗೌಡರ ಜನ್ಮಕೊಟ್ಟಿರೋ ಆರು ಜನ ಮಾತ್ರ ಅಲ್ಲ.ಈ ನಾಡಿನ ಪ್ರತಿ ಕುಟುಂಬ ನಮ್ಮ ಕುಟುಂಬ ,
ಬಿಜೆಪಿಯವರು ಅಭಿವೃದ್ಧಿ ಹೆಸರಲ್ಲಿ ರಾಜ್ಯವನ್ನ ಲೂಟಿ ಹೊಡೆದುಕೊಂಡು ಕುಳಿತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.