ಬೆಂಗಳೂರು : ಸ್ಯಾಂಡಲ್’ವುಡ್’ನ ಗೋಲ್ಡನ್ ಕ್ವೀನ್, ನಟಿ ಅಮೂಲ್ಯ ಅವಳಿ ಮಕ್ಕಳಿಗೆ ನಾಮಕರಣ ಮಹೋತ್ಸವ ನೆರವೇರಿದೆ.
ನಗರದ ಖಾಸಗಿ ಪಂಚತಾರಾ ಹೋಟೆಲ್ ನಲ್ಲಿ ಶುಭಕಾರ್ಯ ನೆರವೇರಿದ್ದು, ಅಮೂಲ್ಯ- ಜಗದೀಶ್ ದಂಪತಿ ತಮ್ಮ ಇಬ್ಬರು ಅವಳಿ ಗಂಡು ಮಕ್ಕಳಿಗೆ ಅಥರ್ವ್ ಹಾಗೂ ಆಧವ್ ಎಂದು ನಾಮಕರಣ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಇಡೀ ಚಿತ್ರರಂಗ ಸಾಕ್ಷಿಯಾಗಿದ್ದು, ನಟ ಶಿವರಾಜ್’ಕುಮಾರ್, ಪ್ರೇಮ್, ಗಣೇಶ್ ದಂಪತಿ, ನಟಿ ತಾರಾ, ಸುಧಾರಾಣಿ, ಮಾಳವಿಕಾ ಅವಿನಾಶ್ ಶುಭ ಹಾರೈಸಿದ್ರು.