ಚಿತ್ರದುರ್ಗ; ಅ.6ರಂದು ಚಿತ್ರದುರ್ಗದ ಮುರುಘಾಮಠದಲ್ಲಿ ಫೋಟೋಗಳು ಕಳವು ಕೇಸ್ಗೆ ಸಂಬಂಧಿಸಿದಂತೆ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್ .ಕೆ.ಬಸವರಾಜನ್ ಪೊಲೀಸರ ವಶಕ್ಕೆ ಪಡೆದಿದ್ದಾರೆ.
47 ಫೋಟೋಗಳು ಫೋಟೋವನ್ನ ಕಳವು ಮಾಡಿದ ಆರೋಪಿಗಳನ್ನ ನವೆಂಬರ್ 7ರಂದು ಪ್ರಕರಣದ ಇಬ್ಬರು ಆರೋಪಿಗಳಾದ ಹೊಸಹಳ್ಳಿ ಗ್ರಾ.ಪಂ ಸದಸ್ಯ ಮೋಹನ ಮೂರ್ತಿ ಅಲಿಯಾಸ್ ಸ್ವಾಮಿ, ಎಸ್ ಜೆ ಎಮ್ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಶಿವಾನಂದ ಸ್ವಾಮಿಯನ್ನ ಗ್ರಾಮಾಂತರ ಠಾಣೆ ಬಂಧನ ಮಾಡಿದ್ದರು.
ಇನ್ನು ಆರೋಪಿಗಳ ಬಂಧನ ಮಾಡಿ ವಿಚಾರಣೆ ವೇಳೆ ಎಸ್.ಕೆ ಬಸವರಾಜನ್ ಪ್ರಚೋದನೆ ಮಾಡಿದ್ದಾರೆ ಆರೋಪಿ ಬಾಯ್ಬಿಟ್ಟಿದ್ದ. ಇದಕ್ಕೆ ಸಂಬಂಧಿಸಿದಂತೆ ಎಸ್ಕೆ ಬಸವರಾಜನ್ ಅವರನ್ನ ಈಗ ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಬಸವರಾಜನ್ ಪತ್ನಿ ಸೌಭಾಗ್ಯ ವಶಕ್ಕೆ ಪಡೆಯಲು ಪೊಲೀಸರ ಶೋಧ ಕಾರ್ಯ ನಡೆದಿದ್ದು, ಅಜ್ಞಾತ ಸ್ಥಳದಲ್ಲಿಟ್ಟು ಮಾಜಿ ಶಾಸಕ ಬಸವರಾಜನ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಅಲ್ಲದೇ, ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಕೂ ಪುಕರಣ ದಾಖಲಿಸುವಂತೆ ವಿದ್ಯಾರ್ಥಿನಿಯರಿಗೆ ಪ್ರಚೋದಿಸಲಾಗಿದ್ದು, ಈ ಕುರಿತು ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಠದ ಪ್ರೌಢಶಾಲೆಯ ಮಾಜಿ ಉದ್ಯೋಗಿ ಬಸವರಾಜೇಂದ್ರ, ಮುರುಘಾ ಮಠದ ಗಾಯತ್ರಿ, ಮೈಸೂರಿನ ಒಡನಾಡಿ ಸಂಸ್ಥೆಯ ವಿರುದ್ಧ ದೂರು ನೀಡಲಾಗಿದ್ದು, ಇಬ್ಬರು ನಡೆಸಿದ ಸಂಭಾಷಣೆಯ ಆಡಿಯೊವೊಂದನ್ನು ದೂರಿನೊಂದಿಗೆ ಸಲ್ಲಿಸಲಾಗಿದೆ.