Friday, November 22, 2024

ಸ್ಮಶಾನ ಪ್ರೀತಿಸುವವರು ಹಿಂದೂ ಸಂಸ್ಕೃತಿ ಒಪ್ಪಲಾರರು; ನಟ ಜಗ್ಗೇಶ್​​

ಆನೇಕಲ್​; ಭಾರದಲ್ಲಿ ಕನ್ನಡ ಹಾಗೂ ಇಂಗ್ಲೀಷ್​ ಡಿಕ್ಷನರಿ ಮಾಡಿದ್ದು ಆಂಗ್ಲರು. ಆಂಗ್ಲರಿಗೆ ದೇಶ ಹೊಡೆದು ಆಳುವ ಚಿಂತೆನೆಯಿತ್ತು. ಅವರಿಗೆ ದೇಶವನ್ನ ಕೂಡಿಸಿ ಒಗ್ಗಟ್ಟಾಗಿರಲಿ ಅನ್ನುವ ಚಿಂತನೆ ಇರಲಿಲ್ಲ ಎಂದು ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿದ್ದಾರೆ.

ಇತ್ತೀಚಿಗೆ ಚಿಕ್ಕೋಡಿಯ ಕಾರ್ಯಕ್ರಮಯೊಂದರಲ್ಲಿ ಸತೀಶ್​ ಜಾರಕಿಹೊಳಿ ಭಾಗಿಯಾಗಿ ಹಿಂದು ಎನ್ನೋದು ಅಶ್ಲೀಲ ಪದ. ಇದು ಪರ್ಷಿಯನ್​ನಿಂದ ಎರವಲು ಪಡೆಯಲಾಗಿದೆ ಎಂದು ಹೇಳಿದ್ದರು. ಈ ಬಗ್ಗೆ ಇಂದು ದೇವನಹಳ್ಳಿ ಏರ್ಪೋಟ್​ನಲ್ಲಿ ಜಗ್ಗೇಶ್​ ಮಾತನಾಡಿದ್ದಾರೆ.

ಹಿಂದು ಬಗ್ಗೆ ಆಂಗ್ಲರು ಸಾವಿರ ಅರ್ಥ ಕೊಡಬಹುದು. ಆದ್ರೆ ನೀವು ಹಿಂದೂವಾಗಿ ಈ ಮಣ್ಣಲ್ಲಿ ಜನಿಸಿದವರು. ಸರ್ವೆಜನ ಸಖಿನೋ ಭವಂತು ಅಂತ ಹೇಳೋ ಧರ್ಮ ಯಾವುದಾದ್ರು ಇದ್ರೆ ಅದು ನಮ್ಮ ಹಿಂದೂ ಧರ್ಮ‌ವಾಗಿದೆ. ಜಾರಕಿಹೊಳಿಯವರಿಗೆ ಏನು ಗೊತ್ತಿಲ್ಲ ಯಾಕಂದ್ರೆ ಅವರು ವಾಮಾಚಾರ ಪ್ಯಾಮಿಲಿಯವರು ಸ್ಮಶಾನ ಪ್ರೀತಿಸುವವರು. ಸ್ಮಶಾನವನ್ನ ಪ್ರೀತಿಸುವವರು ಯಾರು ಅಂದ್ರೆ ಅವರು ನಮ್ಮ ಸಂಸ್ಕೃತಿಯನ್ನ ಒಪ್ಪದೆ ಇರುವವರು. ಮಾಠಮಂತ್ರ ಮಾಯಾಜಾಲ ಮಾಡುವಂತವರು. ಅವರ ಸಂಖ್ಯೆ ಶೇ 1% ಅವರು ಇಂತವರ ಹೇಳಿಕೆಗಳನ್ನ ನಿಜವಾಗ್ಲೂ ಹಿಂದೂ ಅನ್ನೂ ಹೆಮ್ಮೆಯನ್ನಿಟ್ಟುಕೊಂಡಿರೂ ಹಿಂದೂಗಳು ಕ್ಷಮಿಸಲ್ಲ ಎಂದರು.

ಅಂತೆಯೇ ಮಾತನಾಡಿ, ಮಸಲ್ಮಾನರು ಅವರ ಧರ್ಮದ ವಿರುದ್ದ ಮಾತನಾಡಿದ್ರೆ ಕೂಡಲೆ ಅವರ ಪರಿಣಾಮ ತುಂಬಾ ವಿಕೃತವಾಗಿರುತ್ತದೆ. ಆದ್ರೆ ನಮ್ಮ ಹಿಂದೂಗಳು ಶಾಂತಿಪ್ರಿಯರು ಕ್ಷಮಾಗುಣವುಳ್ಳವರು. ಅವರು ಕ್ಷಮಿಸಿದ್ದಾರೆ ಅಂತ ಪದೇ ಪದೇ ಈ ರೀತಿ ಮಾತನಾಡಲು ಹೋಗಬೇಡಿ. ಅವರು ಎದ್ದುನಿಂತ್ರು ಅಂದ್ರೆ ನಿಮ್ಮ ಹೆಸರು ಹೇಳಲು ಇಲ್ಲದಂತೆ ಮಾಡುತ್ತಾರೆ ಎಂದು ಕೆಂಪೇಗೌಡ ಏರ್ಪೋಟ್ ಬಳಿ ನಟ ಮತ್ತು ಸಂಸದ ಜಗ್ಗೇಶ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES