ಮಂಡ್ಯ:KRS ನ ಬೃಂದಾವನದಲ್ಲಿ ಪದೇ ಪದೇ ಚಿರತೆ ಪ್ರತ್ಯಕ್ಷ ಹಿನ್ನಲೆ,ಸಾರ್ವಜನಿಕರು ಕೆಆರ್ಎಸ್ ಅತ್ತ ಬರಲು ಹಿಂದೇಟಾಕುತ್ತಿದ್ದಾರೆ. ಈ ಹಿನ್ನೆಲೆ ಕಡೆಗೂ ಎಚ್ಚೆತ್ತ ಅರಣ್ಯ ಇಲಾಖೆ.
ಚಿರತೆ ಸೆರೆಗೆ ಸಿಸಿ ಕ್ಯಾಮರಾ ಟ್ರ್ಯಾಪ್ ಅಳವಡಿಕೆ. ಚಿರತೆ ಪ್ರತ್ಯಕ್ಷಗೊಂಡಿರುವ ನಾಲ್ಕು ಕಡೆ ಕ್ಯಾಮರಾ ಟ್ರ್ಯಾಪ್ ಅಳವಡಿಕೆ ಮಾಡಲಾಗಿದೆ. ಮರಕ್ಕೆ ಕ್ಯಾಮರಾ ಟ್ರ್ಯಾಪ್ ಅಳವಡಿಸಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು. ಕ್ಯಾಮರಾ ಟ್ರ್ಯಾಪ್ ಅಳವಡಿಕೆ ಸುತ್ತ ಯಾವುದೇ ಪ್ರಾಣಿ ಸಂಚರಿಸಿದ್ರು ಕ್ಯಾಪ್ಚರ್ ಆಗಲಿರುವ ಪೋಟೋ.
ಡ್ಯಾಂ ಹಾಗೂ ಬೃಂದಾವನದ ಬಳಿ ಒಟ್ಟು 4 ಬೋನ್ ಗಳನ್ನ ಇರಿಸಿರುವ ಅರಣ್ಯ ಇಲಾಖೆ. ಕಾವೇರಿ ನೀರಾವರಿ ನಿಗಮದಿಂದಲು ಮುನ್ನೆಚ್ಚರಿಕೆ. ಡ್ಯಾಂ ಸುತ್ತಮುತ್ತ ಕುರಚಲು ಗಿಡ ತೆಗೆಸುತ್ತಿರುವ ಅಧಿಕಾರಿಗಳು. ಕೂಂಬಿಂಗ್ ಕಾರ್ಯಾಚರಣೆಗೆ ತಯಾರಿ ನಡೆಸಿರುವ ಅರಣ್ಯ ಇಲಾಖೆ.
ಬೃಂದಾವನ ಗಾರ್ಡನ್ ಗೆ ಪ್ರವಾಸಿಗರಿಗೆ ನಿರ್ಬಂಧ. ಅರಣ್ಯಾಧಿಕಾರಿಗಳಿಗೆ ತಲೆ ನೋವಾಗಿರುವ ಚೀತಾ. ಚಿರತೆ ಸೆರೆ ಅರಸಾಹಸ ಪಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು.