Monday, December 23, 2024

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ, ಇಂದು ಬೆಳಗಾವಿ ಜಿಲ್ಲೆ ಎರಡು ಕಡೆ ಜನ‌ ಸಂಕಲ್ಪ ಸಮಾವೇಶ
ಮಧ್ಯಾಹ್ನ 1 ಗಂಟೆಗೆ ರಾಯಬಾಗದಲ್ಲಿ ನಡೆಯಲಿದೆ. ಸಂಜೆ 4 ಗಂಟೆಗೆ ಖಾನಾಪುರದಲ್ಲಿ ಜನ ಸಂಕಲ್ಪ.

ಕಾಂಗ್ರೆಸ್ ಭದ್ರಕೊಟೆಯಾಗಿರುವ ಖಾನಾಪುರ ಕ್ಷೇತ್ರದ ಕಮಲ ಕಲಿಗಳ ಕಸರತ್ತು. ಖಾನಾಪುರ ಕ್ಷೇತ್ರದಲ್ಲಿ ಕಮಲ ಅರಳಿಸಲು ಬಿಜೆಪಿ ಪ್ಲಾನ್. ಸದ್ಯ ಕಾಂಗ್ರೆಸ್ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಪ್ರತಿನಿಧಿಸುವ ಕ್ಷೇತ್ರ ಖಾನಾಪುರ.ವಿಶೇಷ ಹೆಲಿಕ್ಯಾಪ್ಟರ್ ಮೂಲಕ
ಸಿಎಂ ಬಸವರಾಜ ಬೋಮ್ಮಾಯಿ, ಮಾಜಿ‌ ಸಿಎಂ ಬಿ.ಎಸ್.ಯಡಿಯೂರಪ್ಪ ಆಗಮನ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಸಿಎಂ ಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಚಿವ ಶ್ರೀರಾಮುಲು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರಿ ಜಿಲ್ಲೆ ನಾಯಕರು ಸಾಥ್ ನೀಡಲಿದ್ದಾರೆ.

ಮರಾಠಾ ಮತ್ತು ಅಹಿಂದ ಮತಗಳನ್ನ ಗಮನದಲ್ಲಿಟ್ಟುಕೊಂಡು ಜನ ಸಂಕಲ್ಪ ಸಮಾವೇಶ ಆಯೋಜನೆ ಮಾಡಲಾಗಿದ್ದು, ಜನ‌‌ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರಾ ಜಾರಕಿಹೊಳಿ ಬ್ರದರ್ಸ್. ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭಾಗವಹಿಸುತ್ತಾರಾ? ಎಂಬ ಪ್ರಶ್ನೆ ಉದ್ಭವವಾಗಿದೆ.

RELATED ARTICLES

Related Articles

TRENDING ARTICLES