ಬೆಂಗಳೂರು:ಕರ್ನಾಟಕಕ್ಕೆ ಆಫ್ರೀಕನ್ ಹಂದಿಜ್ವರದ ಆತಂಕ ಹಿನ್ನೆಲೆ, ಆರೋಗ್ಯ ಇಲಾಖೆಗೆ ಶುರುವಾಗಿದೆ ಟೆನ್ಷನ್. ರಾಜ್ಯದ ಕೊಡಗಿನಲ್ಲಿ ಕಾಣಿಸಿಕೊಂಡಿರೋ ಆಫ್ರಿಕನ್ ಹಂದಿ ಜ್ವರ.
ಮೊದಲನೆಯದಾಗಿ ಹಂದಿಯಲ್ಲಿ ಕಂಡು ಬಂದಿರೋ ಜ್ವರ, ಈ ಆಫ್ರಿಕನ್ ಹಂದಿಜ್ವರ ಮನುಷ್ಯನಿಗೆ ಬಂದರೆ ಬಲು ಅಪಾಯ. ಸಮಾನ್ಯ ಹಂದಿ ಜ್ಬರಕ್ಜಿಂತಲೂ ಇದು ತೀವ್ರತೆ ಹೆಚ್ಚಾಗಿದೆ. ಹಂದಿಯಿಂದ ಮನುಷ್ಯರಿಗೂ ಬರುವ ಸಾಧ್ಯತೆ ಹಿನ್ನೆಲೆ, ಸಾಮಾನ್ಯ ಜ್ವರದಂತೆಯೇ ಇರಲಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಮಾರ್ಗಸೂಚಿಯಂತೆ ಎಲ್ಲಾ ಕಡೆ ನಿಗಾ ವಹಿಸುತ್ತಿರೋ ಆರೋಗ್ಯ ಇಲಾಖೆ. ಹಂದಿ ಸಾಗಾಣಿಕೆ ಕಡೆಗಳಲ್ಲಿ ಎಚ್ಚರ ವಹಿಸುವಂತೆ ನಿಗಾ. ಇದೇನಾದ್ರೂ ಈ ರೋಗ ಕಂಡು ಬಂದರೆ, ಬಂದ ಜಾಗದ 1 ಕಿ.ಮೀ.ವ್ಯಾಪ್ತಿಯಲ್ಲಿ ರೋಗ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು. 10 ಕಿ.ಮೀ.ವ್ಯಾಪ್ತಿಯನ್ನು ಜಾಗೃತ ವಲಯ ಎಂದು ಘೋಷಣೆ ಮಾಡಬೇಕು
ಈಗ ಕೊಡಗು, ಮಂಗಳೂರಿನಲ್ಲಿ ಬಂದಿರೋದ್ರಿಂದ ಬೇರೆ ಕಡೆಯಲ್ಲಿ ಹರಡದಂತೆ ಮುಂಜಾಗರೂಕತೆ ವಹಿಸಲಾಗಿದೆ. ಇನ್ನು ಈ ಆಫ್ರಿಕನ್ ಹಂದಿ ಜ್ವರದ ಲಕ್ಷಣಗಳು, ಜ್ವರ ನೆಗಡಿ ಬರುವುದು, ವೈರಲ್ ಫೀವರ್‌ನಂತೆಯೇ ಇರಲಿದೆ ಹಾಗೂ ಹೆಚ್ಚಾಗಿ ಮೈ- ಕೈ ನೋವು ಕಾಡಲಿದೆ.