ತುಮಕೂರು: ಮಹಿಳೆ ಮತ್ತು ಮಕ್ಕಳ ಸಾವು ಪ್ರಕರಣ. ಸರ್ಕಾರದ ಲೋಪವೇ ಮಹಿಳೆ ಸಾವಿಗೆ ಪ್ರಮುಖ ಕಾರಣ. ಒಬ್ಬರೇ ವೈದ್ಯರಿಗೆ ಅಧಿಕ ಕೆಲಸ ನೀಡಿದ್ದೇ ಎಡವಟ್ಟಿಗೆ ಕಾರಣ. ಮೂರು ಮೂರು ಕಡೆ ಒಬ್ಬರೇ ವೈದ್ಯರು ಕೆಲಸ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷ ಚಂದ್ರಶೇಖರ್ ಗಂಭೀರ ಆರೋಪ ಮಾಡಿದ್ದಾರೆ.
ಬೆಳಗ್ಗೆ 9 ರಿಂದ 4 ಗಂಟೆವರೆಗೂ ಓಪಿಡಿ, ಅರ್ಧಗಂಟೆ ರೆಸ್ಟ್ ಬಳಿಕ ಮತ್ತೆ 5:30 ರಿಂದ 9:30ರವರೆಗೆ ಆಪರೇಷನ್ ನಲ್ಲಿದ್ದ ಡಾ.ಉಷಾ.ಈ ವೇಳೆ ಎಂಟು ಸಿಜೇರಿಯನ್ ಆಪರೇಷನ್ ಅಟೆಂಡ್ ಮಾಡಿದ್ದಾರೆ. ಒಬ್ಬರೇ ಡಾಕ್ಟರ್ ಮೂರು ಕಡೆ ಡ್ಯೂಟಿ ಹಾಕಿದ್ದಾರೆ ಅವತ್ತು. ಲೇಬರ್ ವಾಡ್೯, ಆಪರೇಷನ್ ಥಿಯೇಟ್, ಓಪಿಡಿ ಡ್ಯೂಟಿ ಹಾಕಿದ್ದಾರೆ. ಒಬ್ಬರು ಮೂರು ಕಡೆ ಏಕಕಾಲದಲ್ಲಿ ನಿಭಾಯಿಸೋದು ಅಸಾಧ್ಯ.
ಡಾ.ಉಷಾ ರೋಗಿಯನ್ನ ನೇರವಾಗಿ ಭೇಟಿಯಾಗಿ ಪರೀಕ್ಷೆ ನಡೆಸುವ ಕೆಲಸವನ್ನೇ ಮಾಡಿಲ್ಲಾ. ಡಾ.ಉಷಾ ಅವರನ್ನ ಏಕಪಕ್ಷೀಯವಾಗಿ ಅಮಾನತು ಮಾಡಿರೋದು ಎಷ್ಟು ಸರಿ..? ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಂಖ್ಯೆಯನ್ನ ಹೆಚ್ಚು ಮಾಡಬೇಕು. ನಾವು ಡೈರೆಕ್ಟರ್ ಇಂದುಮತಿ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದೇವೆ.
ಡಾ.ಅಮಾನತು ವಿಚಾರವಾಗಿ ತನಿಖೆಯಾಗಬೇಕು ತನಿಖೆಯಲ್ಲಿ ತಪ್ಪಿತಸ್ಥರಾಗಿದ್ರೆ ಖಂಡಿತ ಕ್ರಮಕೈಗೊಳ್ಳಲಿ. ಅದನ್ನ ಬಿಟ್ಟು ಡ್ರೈರೆಕ್ಟ್ ಆಗಿ ವೈದ್ಯರ ಮೇಲೆ ಆರೋಪ ಮಾಡಿ ಅಮಾನತು ಮಾಡಿರೋದು ಖಂಡನೀಯ. ಆಗಾಗಿ ಈ ಪ್ರಕರಣ ನಿವೃತ್ತ ನ್ಯಾಯಾಧೀಶರ ತಂಡದಿಂದ ತನಿಖೆಯಾಗಬೇಕು ಎಮದು ತಿಳಿಸಿದ್ದಾರೆ.