Friday, November 22, 2024

ಮೆಟ್ರೋ ಮಾದರಿಯಲ್ಲೇ ಬಿಎಂಟಿಸಿಯಲ್ಲಿ ಸಿಗಲಿದೆ ಮೊಬೈಲ್ ಟಿಕೆಟ್

ಬೆಂಗಳೂರು : ಸಿಲಿಕಾನ್ ಸಿಟಿ ಬ್ಯುಸಿ ಲೈಪ್ ಗೆ ಪೂರಕವಾಗಿ ಕಾರ್ಯನಿರ್ವಸುವ ನಿಟ್ಟಿನಲ್ಲಿ ಬಿಎಂಟಿಸಿ ತನ್ನನ್ನ ತಾನು ಅಪ್ ಗ್ರೇಡ್ ಮಾಡಿಕೊಳ್ಳಿತ್ತಿದೆ. ಪ್ರತಿ ದಿನ 35 ಲಕ್ಷ ಮಂದಿ ಬಿಎಂಟಿಸಿ ಬಸ್ ನೆಚ್ಚಿಕೊಂಡಿದ್ದಾರೆ. ಆದರೆ ಆಗಾಗ ಪ್ರಯಾಣಿಕರನ್ನ ಕಾಡುವ ಹಲವು ಗೊಂದಲಗಳಿಗೆ ಬ್ರೇಕ್ ಹಾಕಲು ಹೊಸ ಆ್ಯಪ್ ವೊಂದನ್ನ ಲಾಂಚ್ ಮಾಡಲು ಬಿಎಂಟಿಸಿ ನಿರ್ಧಾರಿಸಲಾಗಿದೆ.

ಶೀಘ್ರವೇ ಬಸ್ ನಲ್ಲೂ ಆನ್ಲೈನ್ ನಲ್ಲಿ ಟಿಕೆಟ್ ಕೊಳ್ಳುವ ವ್ಯವಸ್ಥೆಯನ್ನ ಬಿಎಂಟಿಸಿ ಜಾರಿ ಮಾಡಲು ಮುಂದಾಗಿದೆ.
ನಗರ ವ್ಯಾಪ್ತಿಯಲ್ಲಿ ಖಾಸಗಿ ಟ್ಯಾಕ್ಸಿ ಹಾಗೂ ಮೆಟ್ರೋ ಸೇವೆ ಆರಂಭವಾದ ಬಳಿಕ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೀಗಾಗಿ ಪ್ರಯಾಣಿಕರನ್ನ ತನ್ನತ್ತ ಸೆಳೆಯಲು ಈ ಐಡಿಯಾ ಮಾಡಲಾಗ್ತಿದೆ. ಈಗಾಗಲೇ ನಮ್ಮ ಮೆಟ್ರೋ ಕ್ಯೂ ಆರ್ ಕೋಡ್ ಬೇಸ್ಡ್ ಟಿಕೆಟ್ ಸಿಸ್ಟಂ ಜಾರಿಗೆ ತಂದಿದೆ. ಪ್ರಯಾಣಿಕರು ತಮ್ಮ ಮೊಬೈಲ್ಗಳಲ್ಲೇ ಟಿಕೆಟ್ ಖರೀದಿಸಿ ಕ್ಯೂ ಆರ್ ಕೋಡ್ ಬಳಸಿ ಮೆಟ್ರೋ ಎಂಟ್ರಿ ಎಕ್ಸಿಟ್ ಆಗಬಹುದಾಗಿದೆ. ಇದ್ರಿಂದ ಜನ್ರಿಗೆ ಟೈಮ್ ಸೇವಾಗ್ತಿದ್ದು, ಜನ ಕೂಡಾ ಇದನ್ನ ಅತಿವೇಗವಾಗಿ ನೆಚ್ಚಿಕೊಂಡಿದ್ದಾರೆ. ಈಗ ಇದ್ರಿಂದ ಬಿಎಂಟಿಸಿಯೂ ಪ್ರಭಾವಿತವಾಗಿದೆ. ಬಿಎಂಟಿಸಿಯಲ್ಲೂ ಸ್ಮಾರ್ಟ್ ಟಿಕೆಟ್ ವ್ಯವಸ್ಥೆ ಜಾರಿಗೊಳಿಸೋ ಬಗ್ಗೆ ಈಗಾಗಲೇ ಲೆಕ್ಕಾಚಾರ ಆರಂಭವಾಗಿದ್ದು ಇದರ ಸಾಧಕ ಬಾಧಕ ಚರ್ಚೆ ಆರಂಭವಾಗಿದೆ.

ಸದ್ಯ ಬಿಎಂಟಿಸಿಗೆ ಡ್ರೈವರ್ ಸಮಸ್ಯೆ ಉಂಟಾಗಿದೆ. ಹೊಸದಾಗಿ ನೇಮಕಾತಿ ಆಗದೇ ಇರೋ ಹಿನ್ನಲೆ ಡ್ರೈವರ್ ಕೊರತೆ ಹೆಚ್ಚಾಗ್ತಿದೆ. ಹೀಗಾಗಿ ಸದ್ಯ ಕಂಡಕ್ಟರ್ ಗಳಾಗಿರೋರನ್ನ ಡ್ರೈವರ್ಗಳಾಗಿ ನೇಮಿಸೋಕೂ ನಿಗಮದಲ್ಲಿ ಚರ್ಚೆ ನಡೆದಿದೆ. ಆದ್ರೆ ಇದಕ್ಕೆ ಟಿಕೆಟ್ ಕಲೆಕ್ಷನ್ಗೆ ಬೇರೆಯದಾದ ವ್ಯವಸ್ಥೆ ಮಾಡಬೇಕಾಗುತ್ತೆ. ಹೀಗಿರ್ಬೇಕಾದ್ರೆ ಮೆಟ್ರೋ ಕ್ಯೂ ಆರ್ ಕೋಡ್ ಟಿಕೆಟ್ ಜಾರಿಗೆ ತಂದು ಯಶಸ್ಸು ಕಂಡಿದೆ. ಇದೇ ಮಾದರಿಯನ್ನ ಅನುಸರಿಸಿ ಬಿಎಂಟಿಸಿಯಲ್ಲೂ ಸ್ಮಾರ್ಟ್ ಟಿಕೆಟ್ ಸಿಸ್ಟಂ ಜಾರಿಗೆ ತರ್ಬೇಕು ಅನ್ನೋ ಪ್ರಯತ್ನಕ್ಕೆ ಬಿಎಂಟಿಸಿ ಕೈ ಇಟ್ಟಿದೆ.
ಬೈಟ್- ಸೂರ್ಯಸೇನ್ ಬಿಎಂಟಿಸಿ ನಿರ್ದೇಶಕ ಮಾಹಿತಿ ತಂತ್ರಜ್ಞಾನ.

ಈಗಾಗಲೇ ಬಿಎಂಟಿಸಿಯಲ್ಲಿ ಚತುರ ಸಾರಿಗೆ ವ್ಯವಸ್ಥೆಯಲ್ಲಿ ಬಸ್ ಎಲ್ಲಿದೆ. ಎಷ್ಟೊತ್ತಿಗೆ ಬರುತ್ತೆ.ನೀವು ಹೋಗುವ ರೂಟ್ನಲ್ಲಿ ಎಷ್ಟು ಟ್ರಾಫಿಕ್ ಇದೆ ಅನ್ನೋ ಮಾಹಿತಿ ಚತುರ ಸಾರಿಗೆ ವ್ಯವಸ್ಥೆಯಲ್ಲಿ ಸಿಗಲಿದೆ‌. ಇದರ ಜೊತೆಗೆ ಹೈಟೆಕ್ ಸಿಟಿಯಲ್ಲಿ ಬಿಎಂಟಿಸಿ ಇನ್ನಷ್ಟು ಅಪ್ ಗ್ರೇಡ್ ಆಗ್ತಿದೆ.. ಇದರಿಂದ ಅಂಗೈಯಲ್ಲಿ ಬಿಎಂಟಿಸಿ ಟಿಕೆಟ್ ಸಿಗಲಿದೆ. ಇಂತಹಃ ಅದೆಷ್ಟೋ ಯೋಜನೆಗಳನ್ನ ಮಾಡಿ ಕಾಗದ ಮೇಲಿಯೇ ಉಳಿಸಿಕೊಂಡಿರುವ ನಿಗಮ ಮುತುವರ್ಜಿ ವಹಿಸಿ ಯೋಜನೆ ಜಾರಿ ಮಾಡಿದರೆ ಪ್ರಯಾಣಿಕರ ಮೆಚ್ಚಿಗೆಗೆ ಕಾರಣವಾಗಲಿದೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES