ಶಿವಮೊಗ್ಗ: ಚರ್ಮ ಗಂಟು ರೋಗದ ಪರಿಣಾಮ 7 ದಿನಗಳಿಂದ ನಿಂತೆ ಇರುವ ಹೋರಿ. ಶಿವಮೊಗ್ಗದ ಸೊರಬ ತಾಲ್ಲೂಕಿನ ಹಿರೇಚೌಟಿ ಗ್ರಾಮದಲ್ಲಿ ಘಟನೆ ಸಂಬವಿಸಿದೆ.
ಚರ್ಮಗಂಟು ರೋಗದ (ಲಂಪಿ ಸ್ಕಿನ್ ಡಿಸೀಸ್) ಬಾಧೆ ತಾಳಲಾರದೆ ನಿಂತೆ ಇರುವ ಹೋರಿ. ನೋವು ತಾಳಲಾರದೆ ಕಾಲು ಸೋತು ಮಲಗಲು ಪ್ರಯತ್ನಿಸಿ ಸೋಲುತ್ತಿರುವ ಹೋರಿ. ರೋಗಕ್ಕೆ ವ್ಯಾಕ್ಸಿನ್ ಬಿಡುಗಡೆ ಮಾಡಿ ತಿಂಗಳುಗಳೆ ಕಳೆದರು ಇನ್ನು ಹಳ್ಳಿಗಳನ್ನು ತಲುಪಿಲ್ಲ ಎಂಬ ಆರೋಪ. ರೈತರ ಬೆನ್ನೆಲುಬಾದ ಜಾನುವಾರುಗಳಿಗೆ ಬಾಧಿಸುತ್ತಿರುವ ಈ ರೋಗ.ಹೆಚ್ಚಾಗುತ್ತಿರುವ ಈ ರೋಗಕ್ಕೆ ಬಲಿಯಾಗುತ್ತಿವೆ ರಾಸುಗಳು.
ಸರ್ಕಾರ ಗೋಪೂಜೆ ಮಾಡಲು ತೋರಿಸುವ ಆಸಕ್ತಿ ಪಶುವೈದ್ಯಕೀಯದ ಉನ್ನತಿಕರಣಕ್ಕೆ ಯಾಕೆ ತೋರುತ್ತಿಲ್ಲ ಎಂದು ಪ್ರಶ್ನಿಸುತ್ತಿರುವ ರೈತರು. ಕೇಂದ್ರ ಕೃಷಿ ಸಚಿವರು ವ್ಯಾಕ್ಸಿನ್ ಬಿಡುಗಡೆ ಮಾಡಿ ತಿಂಗಳುಗಳೆ ಕಳೆದಿದೆ.ಪ್ರೊವ್ಯಾಕ್ ಇಂಡ್ ಆದರೂ ಯಾವ ಹಳ್ಳಿಗಳನ್ನು ಇನ್ನೂ ತಲುಪಿಲ್ಲ.ಮಹರಾಷ್ಟ್ರ ಗುಜರಾತ್ ಗಳಲ್ಲಿ ಗೋಟ್ ಪಾಕ್ಸ್ ನೆ ಬಳಸಿ ಹತೋಟಿಗೆ ತಂದಿದ್ದಾರೆ.
ಆದರೆ ಶಿವಮೊಗ್ಗದ ಹಳ್ಳಿಗಳಿಗೆ ತಲುಪುತ್ತಿಲ್ಲ ಎಂದು ಆರೋಪಿಸಿದ ರೈತರು. ಪ್ರಸ್ತುತ ಇಡೀ ಹಿರೇಚೌಟಿ ಗ್ರಾಮದಲ್ಲಿ ಕಾಣಿಸಿಕೊಂಡ ಚರ್ಮಗಂಟು ರೋಗ. ಈ ರೋಗದಿಂದ ನರಳುತ್ತಿರುವ ನೂರಾರು ಹಸುಗಳು. ಇಡೀ ಹಳ್ಳಿಯ ಜಾನುವಾರುಗಳನ್ನು ಬಾಧಿಸುತ್ತಿರುವ ಚರ್ಮಗಂಟು ರೋಗ.