ಆಸ್ಟ್ರೇಲಿಯಾ; ವಿಶ್ವಕಪ್ ಸೂಪರ್ 12 ಗ್ರೂಪ್ ಬಿ ಹಂತದಲ್ಲಿ ನಡೆದ ಇಂದಿನ ಟಿ-20 ಪಂದ್ಯವನ್ನ ಜಿಂಬಾಬ್ವೆ ತಂಡವನ್ನ ಭಾರತ ಬಗ್ಗು ಬಡಿದಿದೆ.
ಇಂದು ಆಸ್ಟ್ರೇಲಿಯಾ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತವು ಜಿಂಬಾಬ್ವೆಯನ್ನು 71 ರನ್‌ಗಳಿಂದ ಸೋಲಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 5 ವಿಕೆಟ್‌ಗೆ 186 ರನ್‌ಗಳನ್ನ ಗಳಿಸಿತು. ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ ಔಟಾಗದೆ 61 ರನ್ ಕಲೆಹಾಕಿದರು. ಭಾರತದ 187 ರನ್ ಗುರಿ ಬೆನ್ನತ್ತಿದ್ದ ಜಿಂಬಾಬ್ವೆ ತಂಡ 17.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 115 ರನ್‌ಗಳಿಗೆ ಆಲೌಟ್ ಆಯಿತು. ರವಿಚಂದ್ರನ್ ಅಶ್ವಿನ್ ತಮ್ಮ ನಾಲ್ಕು ಓವರ್‌ಗಳಲ್ಲಿ 22 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸಿದರು.
ಭಾರತ ಗೆಲುವು ಸಾಧಿಸುತ್ತಿದ್ದಂತೆ ಗ್ರೂಪ್ ಬಿ ಹಂತದ ಅಂಕಪಟ್ಟಿಯ ತಂಡಗಳಲ್ಲಿ ಮೊದಲ ಸ್ಥಾನವನ್ನ ಭಾರತ, ಎರಡನೇ ಸ್ಥಾನವನ್ನ ಪಾಕಿಸ್ತಾನ ತಂಡ ಪಡೆದಿದೆ. ಇನ್ನು ಗ್ರೂ ಬಿ ಹಂತದ ಅಂಕಪಟ್ಟಿಯ ಮೊದಲ ಸ್ಥಾನವನ್ನ ನ್ಯೂಜಿಲೆಂಡ್, ಎರಡನೇ ಸ್ಥಾನವನ್ನ ಇಂಗ್ಲೆಂಡ್ ಪಡೆದಿದೆ.
ನವೆಂಬರ್ 10ರಂದು ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಅಡಿಲೇಡ್ ಓವಲ್‌ನಲ್ಲಿ ಈ ಪಂದ್ಯ ನಡೆಯಲಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದ್ದು, ನವೆಂಬರ್ 9 ರಂದು ಈ ಪಂದ್ಯ ನಡೆಯಲಿದೆ.